ಅಂಜಬೇಡ ಬೇಡಲೊ

ಅಂಜಬೇಡ ಬೇಡಲೊ

( ರಾಗ ರೇಗುಪ್ತಿ. ಝಂಪೆ ತಾಳ) ಅಂಜಬೇಡ ಬೇಡಲೊ ಜೀವ, ಭವ ಭಂಜನ ಹರಿ ಶರಣರ ಕಾವ ||ಪ|| ಬಂದ ಕಷ್ಟಗಳೆಲ್ಲ ತಾಳಿಕೋ, ಬಲು ಸಂದೇಹ ಬಂದಲ್ಲಿ ಕೇಳಿಕೋ ನಿಂದಾಸ್ತುತಿಗಳ ತಾಳಿಕೋ, ಗೋ- ವಿಂದ ನಮ್ಮವನೆಂದು ಹೇಳಿಕೋ|| ಮಾಧವನಿಗೆ ತನು ಮನ ಮೆಚ್ಚು ಕ್ರೋಧ ರೂಪದ ಮಾಯಿಗಳ ಕಚ್ಚು ಮೋದತೀರ್ಥರ ಪಾದವೆ ಹೆಚ್ಚು, ಮಾಯಾ- ವಾದಿ ಮತಕ್ಕೆ ಬೆಂಕಿಯ ಹಚ್ಚು || ಪರ ನಾರಿಯರ ಆಸೆಯ ಬಿಡು, ನೀನು ಪರಮಾತ್ಮನ ಧ್ಯಾನವ ಮಾಡು ಹರಿ ಸರ್ವೋತ್ತಮನೆಂದು ಕೊಂಡಾಡು, ವರದ- ಪುರಂದರವಿಠಲನ ಮೂರ್ತಿಯ ನೋಡು ||
ದಾಸ ಸಾಹಿತ್ಯ ಪ್ರಕಾರ
ಬರೆದವರು