ಬಾರವ್ವ ಭಾಗೀರಥಿ
( ರಾಗ ಬಿಲಹರಿ. ಆದಿ ತಾಳ)
ಬಾರವ್ವ ಭಾಗೀರಥಿ ತೋರವ್ವ ಜನರಿಗೆ ||ಪ||
ನಾ ಸ್ನಾನ ಮಾಡುವುದು ತೋರವ್ವ ಜನರಿಗೆ ||ಅ||
ವ್ಯಾಸಮುನಿ ರಾಯರು ಬಂದು ಭೋಜನಕ್ಕೆ ಕರೆಯಲು
ತ್ವರಿತದಿಂದಲಿ ಬಂದು ಪಾತ್ರದಲಿ ಕುಳಿತೆ
ದಾಸರ ನುಡಿ ಕೇಳಿ ಲೇಸಾಗಿ ತಾ ಬಂದು
ಗ್ರಾಸಕೊಂಬುವ ಜನರ ಪಾತ್ರದಲ್ಲಿ ಪರಿಯಲು ||
ಈ ಮಹಿಮೆಯ ನೋಡಿ ಗುರು ವ್ಯಾಸರಾಯರು
ಶ್ರೀಪತಿ ಪುರಂದರವಿಠಲನ ಕಂಡಂಥ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments