ಬಾರಯ್ಯ ಮನೆಗೆ ರಂಗಯ್ಯ

ಬಾರಯ್ಯ ಮನೆಗೆ ರಂಗಯ್ಯ

( ರಾಗ ಪಂತುವರಾಳಿ/ಕಾಮವರ್ಧಿನಿ. ಛಾಪು ತಾಳ) ಬಾರಯ್ಯ ಮನೆಗೆ ರಂಗಯ್ಯ ನೀನು ||ಪ|| ಬಾರಯ್ಯ ನಮ್ಮ ಮನೆಗೆ ಬಾಲಗೋಪಾಲ ಜಾರಚೋರ ಕೃಷ್ಣ ಜಾನಕೀಪತಿ ರಾಮ ||ಅ|| ನಂದ ನಂದನ ನವನೀತ ಚೋರ ಕೃಷ್ಣ ಮಂದರೊದ್ಧರನೆ ಮಾಧವರಾಯ ರಾಮ || ಗೋಕುಲದೊಳಗೆ ಗೋಪಿಯರ ಕೂಡಿ ಲೋಕ ನೋಡಲವರ ಕಾಕುಮಾಡಿ || ಹಳ್ಳಿಪಳ್ಳಿಗಳೊಳು ಎಲ್ಲ ಮೊಸರು ಹಾಲು ಬೆಣ್ಣೆ ಕೊಳ್ಳೆಯಾಡಿ ಗೋಪಿ ಕುಚ ಪಿಡಿದ ಕೃಷ್ಣ || ಅನಂತ ಪದುಮನಾಭ ಅಪ್ರಮೇಯ ಹೃಷಿಕೇಶ ದಾನವಾಂತಕ ರಂಗ ದಶರಥ ಪುತ್ರ ರಾಮ || ಪರಮ ಪವಿತ್ರ ರಾಮ ಭದ್ರಾಚಲಧೀಶ ವರದ ಶ್ರೀ ಪುರಂದರವಿಠಲ ರಾಮ ||
ದಾಸ ಸಾಹಿತ್ಯ ಪ್ರಕಾರ
ಬರೆದವರು