ಬಾ ಬಾ ರಂಗ ಭುಜಂಗಶಯನ

ಬಾ ಬಾ ರಂಗ ಭುಜಂಗಶಯನ

( ರಾಗ ಕೇದಾರಗೌಳ. ಆದಿ ತಾಳ) ಬಾ ಬಾ ರಂಗ ಭುಜಂಗಶಯನ ಕೋಮಲಾಂಗ ಕೃಪಾಪಾಂಗ ||ಪ|| ಬಾ ಬಾ ಎನ್ನಂತರಂಗ ಮಲ್ಲರ ಗಜಸಿಂಗ ದುರಿತಭವ ಭಂಗ ||ಅ|| ಉಭಯ ಕಾವೇರಿಯ ಮಧ್ಯನಿವಾಸ ಅಭಯದಾಯಕ ಮಂದಹಾಸ ಸಭೆಯೊಳು ಸತಿಯಳ ಕಾಯ್ದ ಉಲ್ಲಾಸ ಇಭವರದನೆ ಶ್ರೀನಿವಾಸ || ಏಳು ಪ್ರಾಕಾರದ ಮಾಳಿಗೆ ಮನೆಯೊಳಗೆ ಗಾಳಿಯ ದೇವರ ದೇವ ಸೋಳಸಾಸಿರ ಗೋಪಿಯರಾಳಿದ ಈ- ರೇಳು ಲೋಕದ ಜನಕಾವ || ಚಂದ್ರಪುಷ್ಕರಿಣಿಯ ತೀರವಿಹಾರ ಇಂದ್ರಾದಿಸುರ ಪರಿವಾರ ಚಂದ್ರಶೇಕರನುತನಾದ ಸುಖ ಸಾಂದ್ರ ಸುಗುಣಗಂಭೀರ || ಈಷಣತ್ರಯಗಳ ದೂಷಿತ ನಿರತ ಅ- ಶೇಷ ವಿಭವ ಜನಪಾಲ ಭೂಷಿತ ನಾನಾ ವಸ್ತ್ರಾಭರಣಾ ವಿಭೀಷಣಗೊಲಿದ ಸುಪ್ರಾಣ || ಶಂಬರಾರಿಯ ಪಿತ ಡಂಭರಹಿತ ಮನ ಅಂಬುಜದಳನಿಭನೇತ್ರ ಕಂಬುಚಕ್ರಧರ ಪುರಂದರವಿಠಲ ತುಂಬುರುನಾರದ ಕೃತಸ್ತೋತ್ರ ||
ದಾಸ ಸಾಹಿತ್ಯ ಪ್ರಕಾರ
ಬರೆದವರು