ಅಚ್ಯುತಾನಂತ ಗೋವಿಂದನೆಂಬ

ಅಚ್ಯುತಾನಂತ ಗೋವಿಂದನೆಂಬ

(ಉದಯರಾಗ ಛಾಪು ತಾಳ) ಅಚ್ಯುತಾನಂದ ಗೋವಿಂದನೆಂಬ ವಸ್ತು ಎನ್ನ ಕೈಸೇರಿತು ||ಪ|| ಎಷ್ಟು ಪುಣ್ಯವ ಮಾಡಿದೆನೊ ಪರವಸ್ತು ಎನ್ನ ಕೈ ಸೇರಿತು ||ಅ|| ವೆಚ್ಚವ ಮಾಡಲಾಗದು ಇದು ಮುಚ್ಚಿ ಬಚ್ಚಿಡಲಾಗದು ಹೊತ್ತಾರೆದ್ದು ಕೀರ್ತನೆ ಮಾಡುವ ವಸ್ತು ಎನ್ನ ಕೈ ಸೇರಿತು || ಕ್ಷೀರಸಾಗರದಮೃತವ ತಂದ ಕಾಮಧೇನು ಕೈಯ ಸೇರಿತು ನೀಲ ವರ್ಣನಾದ ಪಾಲಿಪ ಹೊಸ ದಿವ್ಯ ನೀಲ ಮಾಣಿಕ್ಯ ಕೈಯ ಸೇರಿತು || ಸುರಮುನಿಗಳು ಕೂಡಲು ಇದು ಹರಳಿಗೆ ಬೆಲೆಯಾಗದು ವರಾ ಪುರಂದರವಿಠಲರಾಯನೆಂಬ ಒಡವೆ ಎನ್ನ ಕೈಯ ಸೇರಿತು ||
ದಾಸ ಸಾಹಿತ್ಯ ಪ್ರಕಾರ
ಬರೆದವರು