ಆಚಾರಿಯರೆಂಬವರ
( ರಾಗ ಮುಖಾರಿ. ಅಟ ತಾಳ)
ಆಚಾರಿಯರೆಂಬವರ ಇವರ ನೋಡಿ ||
ಆಚಾರ ಬಲ್ಲವರೆ ಆಚಾರ್ರು ||
ಆ ಎಂದರೆ ಅತಿ ತತ್ವವ ತಿಳಿದವರು
ಅದ್ವೈತ ಮತ ಧ್ವಂಸ ಮಾಡುವರು
ಅತಿಥಿ ಅಭ್ಯಾಗತರಿಗೆ ಅನ್ನವನ್ನೆ ಇಕ್ಕುವರು
ಆಯುತ ವೃತ್ತಿಯನ್ನೆ ಮಾಡುವರು ||
ಚಾ ಎಂದರೆ ಚಂಚಲಾತ್ಮವನೆ ಅಳಿದವರು
ಚೆನ್ನಾಗಿ ವೇದ ಶಾಸ್ತ್ರವನೆ ಓದಿದವರು
ಚಲನೆಯಿಲ್ಲದೆ ಗುರು ಹಿರಿಯರಿಗೆ ಎರಗುವರು
ಚಾನಸ ಬಿಟ್ಟವರು ಆಚಾರಿಯರು ||
ರು ಎಂದರೆ ಋಣವ ಮಾಡದಿದ್ದವರು
ರಿಪುಮಿತ್ರ ಸಮರೆಂದು ನೋಡುವರು
ರೌಪ್ಯ ಸುವರ್ಣ್ವನು ಮೃತ್ತಿಕೆಯೆಂದು ನೋಡುವರು
ರಮಾಧವ ಪುರಂದರವಿಠಲನ ಬಲ್ಲವರೇ ಆಚಾರು ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments