ಆಡಿದನೋಕುಳಿಯ
( ರಾಗ ಪೂರ್ವಿ. ಅಟ ತಾಳ)
ಆಡಿದನೋಕುಳಿಯ ನಮ್ಮ ರಂಗ ಆಡಿದನೋಕುಳಿಯ ||ಪ||
ರಂಬಿಸಿ ಕರೆದು ಚುಂಬಿಸಿ ಒಗೆದನು ರಂಭೇರಿಗೋಕುಳಿಯ ||
ಕದಂಬ ಕಸ್ತೂರಿಯ ಅಳಿ ಗಂಧದ ಓಕುಳಿಯ
ಬಂದರು ಹೊರಗಿನ್ನಾರೇರಾಡುತಂದಚೆಂದದಿ ಓಕುಳಿಯ||
ಪಟ್ಟೆ ಮಂಚದ ಮೇಲೆ ನಮ್ಮ ರಂಗ ಇಟ್ಟ ಮುತ್ತಿನ ಹಾರ
ಬಟ್ಟ ಕುಚಕ್ಕೆ ಕಣ್ಣಿಟ್ಟು ಒಗೆದನು ಕುಟ್ಟಿದನೋಕುಳಿಯ||
ಆರ್ ಹತ್ತುಸಾವಿರ ಗೋಪ ಸ್ತ್ರೀಯರೆಲ್ಲರ ಕೂಡೆ
ಮಾರನಯ್ಯ ಶ್ರೀ ಪುರಂದರವಿಠಲ ಹರಿಸಿ ಓಕುಳಿಯ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments