ಎಂಥಾ ಸಣ್ಣವನೆ ನಿನ್ನ ಮಗ

ಎಂಥಾ ಸಣ್ಣವನೆ ನಿನ್ನ ಮಗ

( ರಾಗ ನಾಟಕುರಂಜಿ. ಅಟ ತಾಳ) ಎಂಥಾ ಸಣ್ಣವನೆ , ನಿನ್ನ ಮಗ- ನೆಂಥಾ ಸಣ್ಣವನೆ ||ಪ || ಎಂಥ ಸಣ್ಣವನಿವನಂಥವರಿಲ್ಲವು ಹೊಂತಕಾರಿ ಬಲವಂತರಿಗಧಿಕನು || ಅ|| ತರಳರಂತಿಪ್ಪನು ತರುಣಿಯರೊಳಾಡುವ ಕಿರಿಬೆರಳುಗುರಿನಲಿ ಗಿರಿಯನೆತ್ತಿದವ || ಕಾಳಿಂಗಸರ್ಪನ ಕಾಲಿಲಿ ತುಳಿದವ ಪಲಾಯನವ ಮಾಡಿ ಕಾಲಯವನ ಸುಟ್ಟು|| ನಿಚ್ಚ ಪಾವನ ಮಾಡಿ ಆಶ್ಚರ್ಯ ತೋರಿದ ಯಂ- ದಚ್ಚು ಮಾಡುವಿರೆಂದು ಮುಚ್ಚಿಕೊಂಬೆಲ್ಲ ನೀ || ಬಾಯಿ ತೆರೆದನಲ್ಲೆ ನೀನಂಜುವಂದದಿ ಆ ಯಮಳಾರ್ಜುನರಾಯನ ಬಿಡಿಸಿದ || ದಿಟ್ಟತನದಿ ಮೊಲೆಕೊಟ್ಟವಳನು ಕೊಂದ ಕೃಷ್ಣ ಪುರಂದರವಿಠಲನರಾಯನು ||
ದಾಸ ಸಾಹಿತ್ಯ ಪ್ರಕಾರ
ಬರೆದವರು