'ಪ್ರಾರ್ಥನೆ'

ಮೋಸ ಹೋದೆನಲ್ಲ

ರಾಗ: ಸುರಟಿ ಆದಿತಾಳ ಮೋಸ ಹೋದೆನಲ್ಲ ಸಕಲವು ವಾಸುದೇವ ಬಲ್ಲ ಭಾಸುರಾಂಗ ಶ್ರೀ ವಾಸುಕಿಶಯನನ ಸಾಸಿರ ನಾಮವ ಲೇಸಾಗಿ ಪಠಿಸದೆ* |ಪ| ದುಷ್ಟ ಜನರ ಕೂಡಿ ನಾನತಿ ಭ್ರಷ್ಟನಾದೆ ನೋಡಿ ಶ್ರೇಷ್ಠರೂಪ ಮುರ ಮುಷ್ಟಿಕ ವೈರಿಯ ನಿಷ್ಠೆಯಿಂದ ನಾ ದೃಷ್ಟಿಸಿ ನೋಡದೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಭಾರತಿ ಭಕುತಿಯನು ಕೊಡುವದು

ರಾಗ: ಸುರಟಿ ಆದಿತಾಳ ಭಾರತಿ ಭಕುತಿಯನು ಕೊಡುವದು ಮಾರುತ ಸತಿ ನೀನು ||ಪ|| ಮೂರು ಲೋಕದೊಳಗಾರು ನಿನಗೆ ಸರಿ | ಮಾರಾರಿಗಳಿಂದಾರಾಧಿತಳೆ ||ಅ. ಪ|| ವಾಣಿ ಎನ್ನ ವದನದಲ್ಲಿಡು ಮಾಣದೆ ಹರಿಸ್ತವನ| ವೀಣಾಧೃತ ಸುಜ್ಞಾನಿಯೆ ಪಂಕಜ | ಪಾಣಿಯೇ ಕೋಕಿಲ ವಾಣಿಯೇ ಪಾಲಿಸೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಕೊಡು ಬೇಗ ದಿವ್ಯ ಮತಿ

ರಾಗ: ವಸಂತ ಆದಿತಾಳ ಕೊಡು ಬೇಗ ದಿವ್ಯ ಮತಿ ಸರಸ್ವತಿ ಮೃಡ ಹರಿ ಹಯ ಮುಖರೊಡೆಯಳೆ ನಿನ್ನಯ ಅಡಿಗಳಿಗೆರಗುವೆ ಅಮ್ಮಾ ಬ್ರಹ್ಮನ ರಾಣಿ | ಇಂದಿರಾರಮಣನ ಹಿರಿಯ ಸೊಸೆಯು ನೀನು ಬಂದೆನ್ನ ವದನದಿ ನಿಂದು ನಾಮವ ನುಡಿಸೆ | ಅಖಿಳ ವಿದ್ಯಾಭಿಮಾನಿ ಅಜನ ಪಟ್ಟದ ರಾಣಿ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಎಂದಿಗಾಹುದೋ ನಿನ್ನ ದರ್ಶನ

ರಾಗ: ಆರಭಿ ರೂಪಕ ತಾಳ ಎಂದಿಗಾಹುದೋ ನಿನ್ನ ದರ್ಶನ ||ಪ|| ಅಂದಿಗಲ್ಲದೆ ಬಂಧ ನೀಗದೊ ||ಅ. ಪ.|| ಗಾನಲೋಲ ಶ್ರೀವತ್ಸ ಲಾಂಛನ ದಾನವಾಂತಕ ದೀನ ರಕ್ಷಕ ಆರಿಗೆ ಮೊರೆಯಿಡಲೊ ದೇವನೆ ಸಾರಿ ಬಂದು ನೀ ಕಾಯೊ ಬೇಗನೆ ಗಜವ ಪೊರೆದೆಯೊ ಗರುಡ ಗಮನನೆ
ದಾಸ ಸಾಹಿತ್ಯ ಪ್ರಕಾರ
ಬರೆದವರು