ಎನಗೊಂದು ಮಾತು ಹೇಳದೆ ಹೋದೆ ಹಂಸ

ಎನಗೊಂದು ಮಾತು ಹೇಳದೆ ಹೋದೆ ಹಂಸ

( ರಾಗ ಶೋಕ ಪಂತುವರಾಳಿ. ಛಾಪು ತಾಳ) ಎನಗೊಂದು ಮಾತು ಹೇಳದೆ ಹೋದೆ ಹಂಸ ||ಪ|| ತನುವಿನೊಳಗೆ ಅನುದಿನವಿದ್ದು ||ಅ|| ಜ್ವಾಲಾಧರವೆಂಬೊ ಮಾಳಿಗೆ ಮನೆಯಲ್ಲಿ ಈಹೋದು ಒಂಭತ್ತು ಬಾಗಿಲ ಗಾಳಿ ಬಂದು ಕುಟ್ಟಿ ಎಲೆ ಹಾರಿ ಹೋಗುವಾಗ ಬೇರಿಗೆ ಹೇಳಿ ಹೋಯಿತೆ ಒಂದು ಮಾತ || ಏರಿಯು ನೀರ ತಡಕೊಂಡಿದ್ದಂತೆ ನಾ ನಿನ್ನ ತಡಕೊಂಡಿದ್ದೆನಲ್ಲ ಭೋರೆಂದು ಮಳೆಯು ಹರಿದೆದ್ದು ಹೋಗುವಾಗ ಏರಿಗ್ಹೇಳಿ ಹೋಯಿತೆ ಒಂದು ಮಾತ || ನಾನಾ ಬೆಟ್ಟಗಳಲ್ಲಿ ಇಟ್ಟಾಣಿ ಫಣಿಯಲ್ಲಿ ಇಕ್ಕಿತು ಜೇನು ತನ್ನ ಸುಖಕಾಗಿ ಜೇನು ತುಪ್ಪವನುಂಡು ನೊಣ ಹಾರಿ ಹೋಗುವಾಗ ಹಿಪ್ಪೆಗ್ಹೇಳಿ ಹೋಯಿದೆ ಒಂದು ಮಾತ || ರಸಭಾರತ ಕೋಟಿ ಹಂಸ ತಾನೊಡಗೂಡಿ ಪೆಸರು ಪೇಳುವನೊ ಅನುದಿನವು ರಸ ಭೋಜನವುಂಡು ಜ್ಯೋತಿ ತಾ ಹೋಗುವಾಗ ಪ್ರಣತಿಗ್ಹೇಳಿ ಹೋಯಿತೆ ಒಂದು ಮಾತ || ಸರ್ಪಶಯನನಾಡಿದ ಮಾತು ಹುಸಿಯಲ್ಲ ಫಣಿಯಕ್ಷರದ ಮೇಲೆ ಕೊಡಲಿಲ್ಲ ಚಪ್ಪಾಣಿ ಮುತ್ತು ಬಾಯಿ ಬಿಚ್ಚಿ ಹೋಗುವಾಗ ದುಃಖ ಬೇಡ ಪುರಂದರವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು