ಬರಬೇಕೋ ರಂಗಯ್ಯ ನೀ

ಬರಬೇಕೋ ರಂಗಯ್ಯ ನೀ

( ರಾಗ ಶಂಕರಾಭರಣ. ಅಟ ತಾಳ) ಬರಬೇಕೋ ರಂಗಯ್ಯ ನೀ ಬರಬೇಕೋ ||ಪ|| ಬರಬೇಕೋ ಬಂದು ಒದಗಬೇಕೋ ಮಮ ಗುರು ನರಹರಿ ನಾರಾಯಣ ನೀನಾ ಸಮಯಕ್ಕೆ ||ಅ|| ಕಂಠಕ್ಕೆ ಪ್ರಾಣ ಬಂದಾಗ ಎನ್ನ ನೆಂಟರಿಷ್ಟರು ಬಂದಳುವಾಗ ಗಂಟು ಹುಬ್ಬಿನ ಕಾಲಭಂಟರು ಕವಿದೆನ್ನ ಗಂಟಲೌಕುವಾಗ ವೈಕುಂಠ ನಾರಾಯಣ || ನಾರಿಯು ಪುತ್ರ ಮಿತ್ರರು ಬಂಧುಗ- ಳಾರೆನ್ನ ಸಂಗಡ ಬಾರರು ಆರಿಗಾರಿಲ್ಯಮನಾರ್ಭಟಕೆ ಅಸು ಹಾರಿ ಮೈ ಮರೆವಾಗ ನೀರೇರುಹನಾಭ || ಕರಿ ಪ್ರಹ್ಲಾದಾದಿಭಕ್ತರ ಪತಿ ಕರಿಸಲು ಒದಗಿದೆ ಶ್ರೀಧರ ನೆರೆ ಹೀನನೆನ್ನ ಉದ್ಧರಿಸಿ ಅಚ್ಯುತ ನಿನ್ನ ಚರಣದೊಳಿಂಬಿಡೊ ಪುರಂದರವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು