ಎಲ್ಲಿ ಶ್ರೀ ತುಲಸಿಯ ವನವು
( ರಾಗ ಭೂಪಾಳಿ. ಅಟ ತಾಳ)
ಎಲ್ಲಿ ಶ್ರೀ ತುಲಸಿಯ ವನವು
ಅಲ್ಲಿ ಒಪ್ಪುವರು ಸಿರಿನಾರಾಯಣರು || ಪ ||
ಗಂಗೆ ಯಮುನೆ ಗೋದಾವರಿ ಕಾವೇರಿ
ಕಂಗೊಳಿಸುವ ಮಣಿಕರ್ಣಿಕೆಯು
ತುಂಗಭದ್ರೆ ಕೃಷ್ಣವೇಣಿ ತೀರ್ಥಗಳೆಲ್ಲ
ಮುಂಗಾಡಿಸುವ ಮೂಲ ವೃಕ್ಷದಲಿರುವರು ||
ಸರಸಿಜಭವ ಭವ ಸುರಪ ಪಾವಕ ಚಂ-
ದಿರ ಸೂರ್ಯ ಮೊದಲಾದವರು
ಸಿರಿರಮಣನ ಆಜ್ಞದಿ ಅಗಲದಂತೆ
ತರುಮಧ್ಯದೊಳು ನಿತ್ಯ ನೆಲಿಸಿಪ್ಪರು ||
ಋಗ್ವೇದ ಯಜುರ್ವೇದ ಸಾಮ ಅಥರ್ವಣ
ಅಘಹಳಿಸುವ ವೇದಘೋಷಗಳು
ಅಗ್ರ ಭಾಗದಲ್ಲಿದೆ ಬೆಟ್ಟದೊಡೆಯ ಅಲ್ಲಿ
ಶೀಘ್ರದಿ ಒಲಿವ ಶ್ರೀಪುರಂದರವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments