ದುಗ್ಗಾಣಿ ಎಂಬುದು ದುರ್ಜನ ಸಂಗ

ದುಗ್ಗಾಣಿ ಎಂಬುದು ದುರ್ಜನ ಸಂಗ

(ರಾಗ ನಾದನಾಮಕ್ರಿಯೆ ಅಟತಾಳ) ದುಗ್ಗಾಣಿ ಎಂಬುದು ದುರ್ಜನ ಸಂಗ ||ಪ || ದುಗ್ಗಾಣಿ ಬಲು ಕೆಟ್ಟದಣ್ಣ ||ಅ|| ಆಚಾರ ಹೇಳೋದು ದುಗ್ಗಾಣಿ, ಬಹು ನೀಚರ ಮಾಡೋದು ದುಗ್ಗಾಣಿ ನಾಚಿಕೆಯಿಲ್ಲದೆ ಮನೆಮನೆ ತಿರುಗಿಸಿ ಛೀ ಛೀ ಎನಿಸೋದು ದುಗ್ಗಾಣಿಯಣ್ಣ || ನೆಂಟತನ ಹೇಳೋದು ದುಗ್ಗಾಣಿ, ಬಹು ನೆಂಟರನೊಲಿಸೋದು ದುಗ್ಗಾಣಿ ಒಂಟೆ ಹಾಂಗೆ ಮೋರೆ ಮೇಲಕ್ಕೆ ಸೆಳಕೊಂಡು ಕುಂಟನೆನಿಸುವುದು ದುಗ್ಗಾಣಿಯಣ್ಣ || ಮಾನವಾಗಿರಿಸೋದು ದುಗ್ಗಾಣಿ, ಮಾನ ಹಸಗೇಡಿಸೋದು ದುಗ್ಗಾಣಿ, ಬಹು ಮಾನನಿಧಿ ಶ್ರೀಪುರಂದರವಿಠಲನ ಕಾಣಿಸದಿರುವುದು ದುಗ್ಗಾಣಿಯಣ್ಣ ||
ದಾಸ ಸಾಹಿತ್ಯ ಪ್ರಕಾರ
ಬರೆದವರು