ಏನಣ್ಣ ನಿನಗೇನಣ್ಣ (ದಶಾವತಾರ)

ಏನಣ್ಣ ನಿನಗೇನಣ್ಣ (ದಶಾವತಾರ)

( ರಾಗ ಆನಂದಭೈರವಿ. ಆದಿ ತಾಳ) ಏನಣ್ಣ ನಿನಗೇನಣ್ಣ ಕಣ್ಣೇಕಣ್ಣ ಮುಚ್ಚವೊಲ್ಲ್ಯಣ್ಣ ಏನಣ್ಣ ನಿನ್ನ ಗೋಳಣ್ಣ ಕಣ್ಣಿಂದ ನೋಡವೊಲ್ಲ್ಯಣ್ಣ ||೧|| ಗೂನಣ್ಣ ಬಲು ಗೂನಣ್ಣ ಗಿರಿಯ ಹ್ಯಾಂಗೆ ನೀ ಹೊತ್ಯಣ್ಣ ಹೀನ ಅಸುರರ ಹ್ಯಾಂಗಣ್ಣ ಮೋಸವ ನೀ ಮಾಡಿದ್ಯಣ್ಣ ||೨|| ಹಲ್ಲಣ್ಣ ಕೋರೆ ಹಲ್ಲಣ್ಣ ಭೂಮಿಯ ಹ್ಯಾಂಗೆ ನೀ ಹೊತ್ಯಣ್ಣ ಒಳ್ಳೆ ಒಳ್ಳೆ ಭಕುತರನ್ನ ಮೆಚ್ಚೆ ನೀನು ಬಂದ್ಯಣ್ಣ ||೩|| ಪೋರನ ಮೊರೆ ಕೇಳಿಯಣ್ಣ ಕಂಭದಿಂದ ಬಂದ್ಯಣ್ಣ ಘೋರವಾದ ನೋಟವ ನೋಡಿ ಅವನಪ್ಪನ ನೀ ಬಡಿದ್ಯಣ್ಣ ||೪|| ಪುಟ್ಟು ಪುಟ್ಟು ಹೆಜ್ಜೆಣ್ಣ ಇಟ್ಟು ನೀಯದರನ್ನ ಕೊಟ್ಟ ಮಣ್ಣಿನ ಒಂದೆ ಬಾರಿ ಅಳೆದ್ಯಣ್ಣ ನೀ ಅಳೆದ್ಯಣ್ಣ ||೫|| ರಾಮಣ್ಣ ಬಡಿಬ್ಯಾಡಣ್ಣ ರಾಯನೊಬ್ಬನಿಲ್ಲಣ್ಣ ನಮ್ಮ ರಾಮಣ್ಣ ಹುಟ್ಟಬೇಕಣ್ಣ ರಾವಣನ ಬಡಿಬೇಕಣ್ಣ ||೬|| ಎಲ್ಯಣ್ಣ ನೀ ಹುಟ್ಟಿದ್ಯಣ್ಣ ಎಲ್ಯಣ್ಣ ನೀ ಬೆಳೆದ್ಯಣ್ಣ ಕೊಲ್ಲ ಬಂದು ಹೆಣ್ಣಿನ ಏನಣ್ಣ ನೀ ಮಾಡಿದ್ಯಣ್ಣ ||೭|| ಮಾನವ ನೀ ಕಳೆದ್ಯಣ್ಣ ಮಾನಿನಿಯರ ಪಿಡಿದ್ಯಣ್ಣ ಮಾನವರ ಪಾಲಿವುದಕ್ಕೆ ಕುದುರೆಯ ನೀ ಏರಿದ್ಯಣ್ಣ ||೮|| ವ್ಯರ್ಥವಾಗಿ ಐದಲಣ್ಣ ವರ್ಷಗಳು ಪೋಯಿತಣ್ಣ ಮರೆದು ಹೋಗದೆ ಕೇಳಣ್ಣ ನಿನ್ನ ಧ್ಯಾನವೆನಗೆ ನೀಡಣ್ಣ ||೯|| ಇಲ್ಲಣ್ಣ ಕೇಳ ಇಲ್ಲಣ್ಣ ನೀನಿಲ್ಲದೆ ಒಂದಿಲ್ಲಣ್ಣ ಎಲ್ಲಾವು ನೀ ಬಲ್ಯಣ್ಣ ನಿನ್ನ ಬಲ್ಲವರಿಲ್ಲಣ್ಣ ||೧೦|| ಮೊದಲಣ್ಣ ನೀ ಮೊದಲಣ್ಣ ಕೊನೆಯಲಿರುವೆ ನೀನಣ್ಣ ಮೊದಲು ಕೊನೆಗಳು ಇಲ್ಲಣ್ಣ ತಂದೆ ಪುರಂದರವಿಠಲಣ್ಣ ||೧೧||
ದಾಸ ಸಾಹಿತ್ಯ ಪ್ರಕಾರ
ಬರೆದವರು