ಎಲೊ ಎಲೊ ಜೀವಾತ್ಮ

ಎಲೊ ಎಲೊ ಜೀವಾತ್ಮ

( ರಾಗ ಮುಖಾರಿ. ಝಂಪೆ ತಾಳ). ಎಲೊ ಎಲೊ ಜೀವಾತ್ಮ ನೀ ಸುಲಲಿತಾತ್ಮನ ನೆನೆದು ಸುಖಿಯಾಗೊ ಮನವೆ ||ಪ|| ಇಕ್ಷುದಂಡ ಕೈಯೊಳಿರೆ ಇಂಧನವ ಮೆಲಲೇಕೆ ಅಕ್ಷಯ ಪಾತ್ರೆಯಿರಲು ಹಸಿದು ಇರಲೇಕೆ ನಿಕ್ಷೇಪ ನಿಧಿಯಿರಲು ನಿರತ ದಾರಿದ್ರವೇಕೆ ಪಕ್ಷಿವಾಹನನನಿರಲು ಪರದೈವವೇಕೆ || ಸುರಧೇನು ಕೈಸೇರಿ ಸುಖವಿಲ್ಲದಿರಲೇಕೆ ಗರುಡಮಂತ್ರವ ಜಪಿಸೆ ಗರಳಭಯವೇಕೆ ತರಣಿ ಮೊದಲುದಯಿಸಲು ಹಲವು ಜ್ಯೋತಿಗಳೇಕೆ ಮುರಹರನ ಪೂಜಿಸದೆ ಮುಂದೆಗೆಡಲೇಕೆ || ಭಾವಶುದ್ಧಿ ಇಲ್ಲದಿಹ ಬಯಲ ಡಂಭಕವೇಕೆ ದೇವತಾಂಕಿತವಿರದ ದೇಹ ತಾನೇಕೆ ಆವಾಗ ಹರಿಯಿರಲು ಅನ್ಯ ಚಿಂತೆಗಳೇಕೆ ಪುರಂದರವಿಠಲನ ಭಜಿಸದೆ ಕೆಡಲೇಕೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು