ಕನಕದಾಸ

ಅಡಿಗೆಯನು ಮಾಡಬೇಕಣ್ಣ, ನಾವೀಗ ಸುಜ್ಞಾನದ

ಅಡಿಗೆಯನು ಮಾಡಬೇಕಣ್ಣ, ನಾವೀಗ ಸುಜ್ಞಾನದ ಅಡಿಗೆಯನು ಮಾಡಬೇಕಣ್ಣ ||ಪ|| ಅಡಿಗೆಯನು ಮಾಡಬೇಕಣ್ಣ , ಮದಿಸಬೇಕು ಮದಗಳನ್ನು ಒಡೆಯನಾಜ್ಞೆಯಿಂದ ಒಳ್ಳೆ ಸಡಗರದಿ ಈ ಮನೆಯ ಸಾರಿಸಿ ||ಅ.ಪ|| ತನ್ನ ಗುರುವನು ನೆನೆಯಬೇಕಣ್ಣ , ತನುಭಾವವೆಂಬ ಭಿನ್ನ ಕಶ್ಮಲವಳಿಯಬೇಕಣ್ಣ ಒನಕೆಯಿಂದ ಕುಟ್ಟಿ ಕೇರಿ ತನಗೆ ತಾನೆ ಆದ ಕೆಚ್ಚ - ನನುವರಿತು ಇಕ್ಕಬೇಕು ಅರಿವರ್ಗವೆಂಬ ತುಂಟರಳಿಸಿ ||೧|| ತತ್ವಭಾಂಡವ ತೊಳೆಯಬೇಕಣ್ಣ , ಸತ್ಯಾತ್ಮನಾಗಿ ಅರ್ತಿ ಅಕ್ಕಿಯ ಮಥಿಸಬೇಕಣ್ಣ ಕತ್ತರಿ ಮನವೆಂಬ ಹೊಟ್ಟನ್ನು ಎತ್ತಿ ಒಲೆಗೆ ಹಾಕಿ ಇನ್ನು ಹೊತ್ತಿಕೊಂಡಿಹ ಮಮತೆಯನ್ನು ಎತ್ತಿ ಹೆಸರ ಹಿಂಗಿಸುತಲಿ ||೨|| ಜನನ ಸೊಂಡಿಗೆ ಹುರಿಯಬೇಕಣ್ಣ , ನಿಜವಾಗಿ ನಿಂತು ತನುವ ತುಪ್ಪವ ಕಾಸಬೇಕಣ್ಣ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಅಂಬುಜದಳಾಕ್ಷಗೆ ಮಂಗಳ ಸರ್ವ ಜೀವರಕ್ಷಕಗೆ ಮಂಗಳ

(ರಾಗ ಪೂರ್ವಿ ಏಕತಾಳ) ಅಂಬುಜದಳಾಕ್ಷಗೆ ಮಂಗಳ ಸರ್ವ ಜೀವರಕ್ಷಕಗೆ ಮಂಗಳ ಅಂಬುಜದಳಾಕ್ಷಗೆ ಮಂಗಳ ||ಪ|| ಜಲಧಿಯೊಳಾಮೆಯ ತಂದಗೆ ಮಂಗಳ ಕುಲಗಿರಿಯನು ತಾಳ್ದವಗೆ ಮಂಗಳ ನೆಲನ ಕದ್ದಸುರನ ಗೆಲಿದವಗೆ ಮಂಗಳ ಸುಲಭ ನರಸಿಂಹಗೆ ಶುಭಮಂಗಳ ||೧|| ವಸುಧೆಯ ಈರಡಿಗೈದಗೆ ಮಂಗಳ ವಸುಕುಲವನ್ನು ಅಳಿದಗೆ ಮಂಗಳ ದಶಕಂಧರನ್ನು ಗೆಲಿದಗೆ ಮಂಗಳ ಪಶುವ ಕಾಯ್ದವನಿಗೆ ಶುಭಮಂಗಳ ||೨|| ಪುರತ್ರಯ ವಧುಗಳ ಗೆಲಿದಗೆ ಮಂಗಳ ತುರಗವಾಹನನಿಂಗೆ ಮಂಗಳ ವರನೆಲೆಯಾದಿಕೇಶವನಿಗೆ ಮಂಗಳ ಸುಲಭ ಸಿರಿಹರಿಗೀಗ ಶುಭಮಂಗಳ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು

ನಡತೆ ಹೀನನಾದರೇನಯ್ಯ , ಜಗದೊಡೆಯನ ಭಕ್ತಿಯಿದ್ದರೆ ಸಾಲದೆ

( ಪೂರ್ವಿ ರಾಗ ಅಷ್ಟತಾಳ) ನಡತೆ ಹೀನನಾದರೇನಯ್ಯ , ಜಗ- ದೊಡೆಯನ ಭಕ್ತಿಯಿದ್ದರೆ ಸಾಲದೆ ಮಿಕ್ಕ ನಡತೆ ||ಪ|| ಪುಂಡರಾ ಪಾಂಡುನಂದನರು ಮತ್ತದರೊಳು ಗಂಡರೈವರು ಭೋಗಿಪರು ಖಂಡಿಸಿದರು ರಣದೊಳಗೆ ಗುರುಹಿರಿಯರ ಪುಂಡರೀಕಾಕ್ಷನ ಒಲುಮೆಯೊಂದಲ್ಲದೆ ||೧|| ಒಂದೊಂದು ಪರಿ ಬುದ್ಧಿಯ ಪೇಳಿ ಹಿರಣ್ಯಕ ಕಂದನ ನಿರ್ಬಂಧಿಸುತಿರೆ ಅಂದು ಸಾಧಿಸಲು ಕಂಬದ ಬಳಿಯೆ ತನ್ನ ತಂದೆಯನು ಕೊಲಿಸಿದನೆಂಬುವರು ಜನರು ||೨|| ದಾಸಿಯ ಜಠರದೊಳು ಜನಿಸಿದ ವಿದುರ ಸ- ನ್ಯಾಸಿ ಎನಿಸಿಕೊಂಡ ಸಾಸಿರ ನಾಮದೊಡೆಯ ವೇಂಕಟೇಶಾದಿ- ಕೇಶವನಾ ಭಕುತಿಯೊಂದಿದರೆ ಸಾಕು||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು

ಒಲ್ಲೆಂದರಾಗುವುದೇ ಅಲ್ಲಿ ಪಡೆದು ಬಂದುದನ್ನು

(ನೀಲಾಂಬರಿ ರಾಗ ರೂಪಕ ತಾಳ) ಒಲ್ಲೆಂದರಾಗುವುದೇ ಅಲ್ಲಿ ಪಡೆದು ಬಂದುದನ್ನು ಎಲ್ಲವನ್ನು ಉಂಡು ತೀರಿಸಬೇಕು ಮನವೆ ||ಪ|| ತಂದೆ ತಾಯಿಯ ಬಸಿರಿನಲ್ಲಿ ಬಂದ ಅಂದಂದಿಗೂ ಒಂದಿಷ್ಟು ಸುಖವ ನಾ ಕಾಣೆ ಜೀವನವೆ ಬಂದದ್ದನೆಲ್ಲವನ್ನು ಉಂಡು ತೀರಿಸಬೇಕು, ಭ್ರಮೆ- ಯಿಂದ ಮನವೆ ನಿನಗೆ ಬಯಲಾಸೆ ಯಾಕೋ ||೧|| ಎಮ್ಮ ಅರ್ಥ ಎಮ್ಮ ಮನೆ ಎಮ್ಮ ಮಕ್ಕಳು ಎಂಬ ಹಮ್ಮು ನಿನಗೆ ಏಕೋ ಹಗೆಯ ಜೀವನವೆ ಬ್ರಹ್ಮನು ಫಣೆಯಲ್ಲಿ ಬರೆದ ಬರಹ ತಪ್ಪುವುದುಂಟೆ ಸುಮ್ಮನೆ ಬಯಲಾಸೆ ವ್ಯರ್ಥ ಜೀವನವೆ ||೨|| ಅಂತರಂಗದಲ್ಲೊಂದು ಅರ್ಧ ದೇಹದಲ್ಲೊಂದು ಚಿಂತೆಗನುಗೊಳಲೇಕೆ ಪಂಚೈವರಿರಲು ಕಂತುಪಿತ ಕಾಗಿನೆಲೆ ಆದಿಕೇಶವರಾಯ ಲಕ್ಷ್ಮೀ- ಕಾಂತ ನಮ್ಮನಲ್ಲಿಗೆ ಕರೆಕಳುಹುವ ತನಕ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು

ತನ್ನ ಪ್ರಾಪ್ತಿಯ ಫಲವ ತಾನರಿಯದೆ

( ಮುಖಾರಿ ರಾಗ ಝಂಪೆ ತಾಳ) ತನ್ನ ಪ್ರಾಪ್ತಿಯ ಫಲವ ತಾನರಿಯದೆ ಇನ್ನು ನುಡಿವುದು ಮೂರ್ಖತನವಲ್ಲವೆ ||ಪ|| ಸರಸಿಜೋದ್ಭವನು ಫಣೆ*ಯೊಳು ಬರೆದು ನಿರ್ಮಿಸಿದ ತೆರನೊಂದು ಬೇರುಂಟೆ ತಾನರಿಯದೆ ಕರಕೊಂಡು ಕಂಡವರ ಕೂಡೆ ತಾನಾಡಿದರೆ ನೆರೆ ದುಃಖವಿದು ಬಿಟ್ಟು ಕಡೆಗೆ ತೊಲಗುವುದೆ ||೧|| ಬಡತನವು ಬಂದಲ್ಲಿ ಪೂರ್ವದಲಿ ತಾ ಮುನ್ನ ಪಡೆದಂಥ ವಿಧಿ ಬೆನ್ನ ಬಿಡಲರಿವುದೆ ಅಡಿಗಡಿಗೆ ಶೋಕದಲಿ ಅವರಿವರಿಗುಸುರಿದರೆ ಬಡತನವು ತಾ ಮುನ್ನ ಕಡೆಗೆ ತೊಲಗುವುದೆ ||೨|| ದೆಸೆಗೆಟ್ಟು ನಾಡದೈವಗಳಿಗೆ ಹಲುಬಿದಡೆ ನೊಸಲ ಬರಹವ ತೊಡೆದು ತಿದ್ದಲಳವೆ ವಸುಧೀಶ ಕಾಗಿನೆಲೆಯಾದಿಕೇಶವನಂಘ್ರಿ ಬಿಸಜ**ವನು ಕಂಡು ನೀ ಸುಖಿಯಾಗು ಮನುಜ ||೩|| (*ಫಣೆ=ಹಣೆ , **ಬಿಸಜ=ಕಮಲ, ತಾವರೆ)
ದಾಸ ಸಾಹಿತ್ಯ ಪ್ರಕಾರ
ಬರೆದವರು