ಯಾರಿದ್ದರೇನಯ್ಯ

ಯಾರಿದ್ದರೇನಯ್ಯ

( ರಾಗ ಮುಖಾರಿ ಝಂಪೆ ತಾಳ) ಯಾರಿದ್ದರೇನಯ್ಯ ನೀನಲ್ಲದೆನಗಿಲ್ಲ ಕಾರುಣ್ಯನಿಧಿ ಹರಿಯೆ ಕೈಯ ಬಿಡಬೇಡ ||ಪ| ದುರುಳ ಕೌರವನಂದು ದ್ರುಪದಜೆಯ ಸೀರೆಯನು ಕರದಿಂದ ಸೆಳೆಯುತಿರೆ ಪತಿಗಳೆಲ್ಲ ಗರಹೊಯ್ದಂತಿದ್ದರಲ್ಲದೇ ನರಹರಿಯೆ ಕರುಣದಿಂ ನೀನಲ್ಲದಿನ್ಯಾರು ಕಾಯ್ದವರು || ಅಂದು ನೆಗಳಿನ ಬಾಧೆಯಿಂದ ಗಜರಾಜನು ತಂದೆ ನೀ ವೈಕುಂಠದಿಂದ ಬಂದು ಇಂದಿರೇಶನೆ ಚಕ್ರದಿಂದ ನೆಗಳಿನ ಬಾಯ ಸಂಧಿಯನು ಸೀಳಿ ಪೊರೆದೆಯಲ್ಲೊ ಹರಿಯೆ || ಅಜಮಿಳನು ಕುಲಗೆಟ್ಟು ಕಾಲದೂತರು ಬರಲು ನಿಜಸುತನ ಕರೆಯ ನೀನತಿವೇಗದಿ ತ್ರಿಜಗದೊಡೆಯನೆ ಪುರಂದರವಿಠಲ ಕರುಣದಲಿ ನಿಜದೂತರನು ಕಳುಹಿ ಕಾಯ್ದೆ ಗಡ ಹರಿಯೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು