ನಿನ್ನ ಮಹಿಮೆಯನು ಪೊಗಳುವರೆ

ನಿನ್ನ ಮಹಿಮೆಯನು ಪೊಗಳುವರೆ

(ರಾಗ ಸೌರಾಷ್ಟ್ರ ಆದಿತಾಳ ) ನಿನ್ನ ಮಹಿಮೆಯನು ಪೊಗಳುವರೆ ಎನ್ನಳವಲ್ಲ ವಿಚಿತ್ರಚರಿತ್ರ ||ಪ || ಪಾಲುಗಡಲು ಮನೆಯಾಗಿರಲು ಒಂ- ದಾಲದೆಲೆಯ ಮೇಲೆ ಮಲಗುವರೆ ಮೂಲೋಕವು ನಿನ್ನ ಉದರದೊಳಿರುದಿರೆ ಬಾಲಕನಾಗಿ ಎತ್ತಿಸಿಕೊಂಬರೆ || ಸಿರಿ ನಿನ್ನ ಕೈವಶವಾಗಿರಲು ನೀ ತಿರಿವರೆ ಬಲಿಯ ದಾನಕೆ ಪೋಗಿ ಸರಸಿಜೋದ್ಭವ ನಿನ್ನ ಪೂಜೆಯ ಮಾಡಲು ನರನ ಬಂಡಿಗೆ ಬೋವನಾಗುವರೆ || ಕಮ್ಮಂಗೋಲನ ಪಿತನಾಗಿರಲು ಗಮ್ಮನೆ ಕುಬುಜೆಗೆ ಸೋಲುವರೆ ಬೊಮ್ಮನಯ್ಯನೆ ಪರಬೊಮ್ಮನೆಂದೆನಿಸುವ ಹ(/ಅ?)ಮ್ಮಿನ ದೇವರ ಗಂಡ ಪುರಂದರವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು