ಯಶೋದೆಯಮ್ಮ ಎನ್ನನು ಎತ್ತಿಕೊಳ್ಳಮ್ಮ

ಯಶೋದೆಯಮ್ಮ ಎನ್ನನು ಎತ್ತಿಕೊಳ್ಳಮ್ಮ

( ರಾಗ ಭೈರವಿ ಆದಿ ತಾಳ) ಯಶೋದೆಯಮ್ಮ, ಎನ್ನನು ಎತ್ತಿಕೊಳ್ಳಮ್ಮ || ಬಿಸಿನೀರು ಕಾಸಬೇಡೆ ಅಮ್ಮ ನೀನು ಗುಕ್ಕುಚಿ ಮಾಡಬೇಡೆ ಬಿಸಿ ಮೊಮ್ಮ ಉಪ್ಪಿನಕಾಯಿ ಅಮ್ಮ ನಾನು ಉಣಲಾರೆ ಉತ್ತುತ್ತೆ ಹಣ್ಣು ಬೆಣ್ಣೆ ತಿಂದೇನೆ || ಕಳ್ಳ ಕೃಷ್ಣ ಎನ್ನುತಾರೆ ಬಂದನೆಂದು ಬೇಗ ಬೇಗ ತಿನ್ನುತಾರೆ ಗಲ್ಲ ಕಚ್ಚಿ ಕಚ್ಚಿ ಎನ್ನ ಹಲ್ಲು ಬಾಯಿ ನೋಯುತಿದೆ ವಲ್ಲಭೇರು ಎನ್ನ ಗೋಪಿ ಕೊಲ್ಲುತಾರೆ || ಸುಮ್ಮಾನೆ ಮಲಗಬೇಡ ಅಮ್ಮ ನೀನು ಎನ್ನ ಕಡೆ ಮೋರೆ ಮಾಡೆ ಚಿಕ್ಹಾವು ಕಂಡೆನೆ ಅಂಜಿಕೆ ಬರುತಿದೆ ಕ್ಷಣ ಹೊತ್ತು ಎನ್ನ ಕೂಡೆ ಮಾತನಾಡೆ || ನಕ್ಷತ್ರ ತಂದುಕೊಡೇ ಚಂದ್ರಮನ ಇತ್ತಿತ್ತ ಕರೆದು ತಾರೆ ಈಕ್ಷಿಸಿ ನಲಿವಂಥ ಪುರಂದರವಿಠಲನ ಒಂದು ಬಾರಿ ಮುದ್ದಾಡಿ ಚಂದ ನೋಡೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು