ಮೆಲ್ಲ ಮೆಲ್ಲನೆ ಬಂದನೆ

ಮೆಲ್ಲ ಮೆಲ್ಲನೆ ಬಂದನೆ

(ರಾಗ ಮೋಹನ. ಆದಿ ತಾಳ ) ಮೆಲ್ಲ ಮೆಲ್ಲನೆ ಬಂದನೆ ,ಗೋಪ್ಯಮ್ಮ ಕೇಳೆ ಮೆಲ್ಲ ಮೆಲ್ಲನೆ ಬಂದನೆ ||ಪ|| ಮೆಲ್ಲ ಮೆಲ್ಲನೆ ಬಂದು ಗಲ್ಲಕ್ಕೆ ಮುದ್ದು ಕೊಟ್ಟು ನಿಲ್ಲದೆ ಓದಿ ಪೋದ ಕಳ್ಳಗೆ ಬುದ್ಧಿ ಪೇಳೆ ||ಅ.ಪ|| ಹಾಲು ಮಾರಲು ಪೋದರೆ, ನಿನ್ನಯ ಕಂದ, ಕಾಲಿಗಡ್ಡವ ಕಟ್ಟಿದ ಹಾಲ ಸುಂಕವ ಬೇಡಿ ಕೋಲನ್ನೆ ಅಡ್ಡಕಟ್ಟಿ ಶಾಲೆಯ ಸೆಳಕೊಂಡು ಹೇಳದೋಡಿದ ಕೃಷ್ಣ || ಮೊಸರ ಮಾರಲು ಪೋದರೆ, ನಿನ್ನಯ ಕಂದ ಹೆಸರೇನೆಂದೆಲೆ ಕೇಳಿದ ಹಸನಾದ ಹೆಣ್ಣ ಮೇಲೆ ಕುಸುಮವ ತಂದಿಕ್ಕಿ ಶಶಿಮುಖಿಯರಿಗೆಲ್ಲ ಬಸಿರು ಮಾಡಿದನೀತ || ಹೋಗಿರೆ ರಂಗಯ್ಯನ ಮೇಲೆ , ನೀವು ದೂರೇನು ಕೊಂಡು ಬಂದಿರೆ , ಯೋಗೀಶ ಪುರಂದರ ವಿಠಲ ರಾಯನ ತೂಗಿ ಪಾಡಿರೆ ಬೇಗ ನಾಗವೇಣಿಯರೆಲ್ಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು