ಏನು ಮರುಳಾದೆವ್ವ ಎಲೆ ಭಾರತಿ

ರಾಗ: ಹಂಸಧ್ವನಿ ತಾಳ: ಝಂಪೆ ಏನು ಮರುಳಾದೆವ್ವ ಎಲೆ ಭಾರತೀ | ನೀನರಿಯೆ ಪವನನಿಂಥವನೆಂದು |ಪ| ಕಲ್ಲು ಹೊರುವನು ಮತ್ತೆ ಯಾರಿಂದಲಾಗದವು | ಎಲ್ಲರಂತಲ್ಲ ಕಪಿರೂಪ ನೋಡು ಖುಲ್ಲ ಫಲಪುಷ್ಪಯುಕ್ತ ವನವನು ಕೆಡಿಸಿದನು | ಎಲ್ಲಿಂದ ಒದಗಿದನು ಈ ಪತಿಯು ನಿನಗೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ದಾರ ಮಗನಮ್ಮ

(ರಾಗ ಬೇಗಡ. ಛಾಪು ತಾಳ) ದಾರ ಮಗನಮ್ಮ, ರಂಗಯ್ಯ ದಾರ ಮಗನಮ್ಮ ದಾರಿಯ ನೋಡುತ್ತ ದಾರು ಈತನ ದಾರು ತಿಳಿಯದು ಅರವಿಂದಾನನೆ ಕೇಳ್ ಅರ ಮೊರೆಯಾದರೆ ಅರಿಯದಂದದಿ ಬಂದು ಅ- ಧರ ಮುದ್ದಾಡಿದ ಕಾಂತೆ ಕೇಳ್ ಏ- ಕಾಂತದಿ ಮಲಗಿದೇ ಕಾಂತನಾಗಿ ಏ- ಕಾಂತಕ್ಕೆ ಕರೆತಾರೆ ನಾರಿ ಕೇಳೆ ಅಕ್ಕ
ದಾಸ ಸಾಹಿತ್ಯ ಪ್ರಕಾರ
ಬರೆದವರು

ದಾನವನ ಕೊಂದದ್ದಲ್ಲ

(ರಾಗ ತೋಡಿ. ಆದಿ ತಾಳ) ದಾನವನ ಕೊಂದದ್ದಲ್ಲ ಕಾಣಿರೋ ||ಪ|| ಗಾನ ವಿನೋದಿ ನಮ್ಮ ತೊರೆವೆಯ ನರಸಿಂಹ ||ಅ.ಪ|| ಅಚ್ಚ ಪುರುಷನೆಂಬ ಸ್ವಚ್ಚ ರತ್ನ ಒಡಲೊಳು ಬಿಚ್ಚಿ ನೋಡಿದರಿನ್ನೆಷ್ಟು ಇದ್ದಾವೊ ಎಂದು ನೆಂಟತನವು ಬೆಳೆಯ ಬೇಕೆಂದು ಕರುಳ ಕೊರಳೊಳು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಚಿತ್ತೈಸಿದ ವ್ಯಾಸರಾಯ

(ರಾಗ ಭೈರವಿ. ಅಟ ತಾಳ) ಚಿತ್ತೈಸಿದ ವ್ಯಾಸರಾಯ ಚಿತ್ತಜನಯ್ಯನ ಸಭೆಗೆ ||ಪ|| ನಿತ್ಯ ಮುತ್ತೈದೆಯರೆಲ್ಲ ಎತ್ತೆ ರತುನದಾರತಿಯ ||ಅ.ಪ|| ಹೇಮ ಮಯವಾದ ದಿವ್ಯ ವ್ಯೋಮಯಾನವನ್ನೆ ಏರಿ ಸ್ವಾಮಿ ವ್ಯಾಸರಾಯ ಪೊರಟ ಪ್ರೇಮದಿ ಹರಿಪುರಕೆ ಹಾಟಕದ ಬೆತ್ತಕೋಟಿ ಸಾಟಿ ಇಲ್ಲದೆ ಪಿಡಿದು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಚಿಂತೆ ಯಾತಕೋ

(ರಾಗ ಪಂತುವರಾಳಿ. ರೂಪಕ ತಾಳ) ಚಿಂತೆ ಯಾತಕೋ, ಬಯಲ ಭ್ರಾಂತಿ ಯಾತಕೋ ||ಪ|| ಕಂತು ಪಿತನ ದಿವ್ಯ ನಾಮ ಮಂತ್ರವನ್ನು ಜಪಿಸುವವಗೆ || ಅ.ಪ|| ಕಾಲ ಕಾಲದಲ್ಲಿ ಬಿಡದೆ ವೇಳೆಯರಿತು ಕೂಗುವಂಥ ಕೋಳಿ ತನ್ನ ಮರಿಗೆ ಮೊಲೆಯ ಹಾಲ ಕೊಟ್ಟು ಸಲಹಿತೆ ಸಡಗರದ ನಾರಿಯರು ಹಡೆಯುವಾಗ ಸೂಲಗಿತ್ತಿ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಚಿಕ್ಕವನೇ ಇವನು?

(ರಾಗ ಮೋಹನಕಲ್ಯಾಣಿ. ಅಟ ತಾಳ) ಚಿಕ್ಕವನೇ ಇವನು , ನಮ್ಮ ಕೈಗೆ ಸಿಕ್ಕದೆ ಓಡುವನು ||ಪ|| ಅಕ್ಕಯ್ಯ ಮಕ್ಕಳು ಹುಟ್ಟುವ ಮರ್ಮವ ಘಕ್ಕನೆ ಎನಕೂಡೆ ಹೇಳು ಹೇಳೆನುತಾನೆ || ಅ.ಪ || ನೀರಿಗೆ ಹೋಗುವಾಗ ನಿಂತುಕೊಂಡು ಯಾರು ಇಲ್ಲದೆ ಕರೆವ ದಾರಿಯಡ್ಡವ ಕಟ್ಟಿ ಕೂಡಿಕೊ ಎನುತಲೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಚಂದ್ರಚೂಡ ಶಿವ

(ರಾಗ ಶಂಕರಾಭರಣ. ಆದಿ ತಾಳ.) ಚಂದ್ರಚೂಡ ಶಿವ ಶಂಕರ ಪಾರ್ವತಿ ರಮಣಾ ನಿನಗೇ ನಮೋ ನಮೋ ಸುಂದರ ಮೃಗಧರ ಪಿನಾಕಧನುಕರ ಗಂಗಾಶಿರ ಗಜಚರ್ಮಾಂಬರಧರ ನಂದಿ ವಾಹನಾನಂದದಿಂದ ಮೂರ್ಜಗದಿ ಮೆರೆವನು ನೀನೆ ಕಂದರ್ಪನ ಕ್ರೋಧದಿಂದ ಕಣ್ದೆರೆದು ಕೊಂದ ಉಗ್ರನು ನೀನೆ , ಘಟ-
ದಾಸ ಸಾಹಿತ್ಯ ಪ್ರಕಾರ
ಬರೆದವರು

ಭಾರತಿ ದೇವಿಯ ನೆನೆ

(ರಾಗ ಖರಹರಪ್ರಿಯ. ಆದಿ ತಾಳ). ಭಾರತಿ ದೇವಿಯ ನೆನೆ ನೆನೆ ನಿರತ ಭಕುತಿಗಿದು ಮನೆ ಮನೆ ಮಾರುತನರ್ಧಾಂಗಿ ಸುಚರಿತ ಕೋಮಲಾಂಗಿ ಸಾರಸಾಕ್ಷಿ ಕೃಪಾಂಗಿ ಅಪಾಂಗಿ ಕಿಂಕಿಣಿ ಕಿಣಿ ಪಾದಪಂಕಜ ನೂಪುರ ಕಂಕಣ ಕುಂಡಲಾಲನ್ಕೃತ ದೇಹ ಶಂಕರಸುರವರ ವಂದಿತ ಚರಣೆ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಬಂಡನಾದೆನು

(ರಾಗ ಮುಖಾರಿ. ಝಂಪೆ ತಾಳ) ಬಂಡನಾದೆನು ನಾನು ಸಂಸಾರದಿ ಕಂಡು ಕಾಣದ ಹಾಗೆ ಇರಬಹುದೆ ಹರಿಯೆ ಕಂಡ ಕಲ್ಲುಗಳಿಗೆ ಕೈಮುಗಿದು ಸಾಕಾದೆ ದಿಂಡೆಗಾರರ ಮನೆಗೆ ಬಲು ತಿರುಗಿದೆ ಶುಂಡಾಲನಂತೆನ್ನ ಮತಿ ಮಂದವಾಯಿತೈ ಪುಂಡರೀಕಾಕ್ಷ ನೀ ಕರುಣಿಸೈ ಬೇಗ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಬೇಡವೋ ಬ್ರಹ್ಮದ್ರೋಹ

( ರಾಗ ಶಂಕರಾಭರಣ. ಅಟ ತಾಳ) ಬೇಡವೋ ಬ್ರಹ್ಮದ್ರೋಹ ಬೇಡವೋ ||ಪ|| ಹೊತ್ತಿಹೆ ನರಜನ್ಮವನ್ನು ,ಪಾದ ಸುತ್ತಿ ಕೊಂಡಿಹುದಲ್ಲೊ ನೀನು ಆಹಾ ಚಿತ್ತದೊಳಗೆ ನೋಡು ಉತ್ತಮ ವಿಪ್ರರ ವೃತ್ತಿಯ ಕಳೆದು ಉನ್ಮತ್ತನಾಗಲು ಬೇಡ ಸೂಸುವ ನದಿಯಲ್ಲಿ ಬಿದ್ದು ಮುಂದೆ ಈಸಲಾರದೆ ಮುಳುಗೆದ್ದು ಆಹಾ
ದಾಸ ಸಾಹಿತ್ಯ ಪ್ರಕಾರ
ಬರೆದವರು