ಮಧ್ವರಾಯ ಗುರು

ಮಧ್ವರಾಯ ಗುರು

(ರಾಗ ಸಾವೇರಿ. ಆಟ ತಾಳ) ಮಧ್ವರಾಯ ಗುರು ಮಧ್ವರಾಯ ಗುರು ಮಧ್ವರಾಯ ಗುರು ಮಧ್ವರಾಯ ||ಪ|| ರಾಮಾವತಾರದೊಳೊಮ್ಮೆ ಮಧ್ವರಾಯ ನೀ ಮಹಾ ಹನುಮನಾದ್ಯೋ ಮಧ್ವರಾಯ ಕಾಮಿತಾರ್ಥ ಸುರರಿಗಿತ್ತ್ಯೋ ಮಧ್ವರಾಯ , ಅಯ್ಯ ಮುಷ್ಟಿಯಿಂದ ರಾವಣನ ಗೆದ್ಯೋ ಮಧ್ವರಾಯ || ಕೃಷ್ಣಾವತಾರದೊಳೊಮ್ಮೆ ಮಧ್ವರಾಯ ದಿಟ್ಟ ಕಲಿ ಭೀಮನಾದ್ಯೋ ಮಧ್ವರಾಯ ಕುಟ್ಟಿದ್ಯೋ ಕೌರವರನ್ನೆಲ್ಲ ಮಧ್ವರಾಯ , ಅಯ್ಯ ಶ್ರೀ- ಕೃಷ್ಣನ ಹಿತವ ಪಡೆದ್ಯೋ ಮಧ್ವರಾಯ || ಧರಣಿಯೊಳು ನರನಾಗಿ ಜನಿಸಿದ್ಯೋ ಮಧ್ವರಾಯ ದುರುಳ ಮಾಯಮತವ ತರಿದ್ಯೋ ಮಧ್ವರಾಯ ಗುರು ವ್ಯಾಸರ ಹಿತವ ಪಡೆದ್ಯೊ ಮಧ್ವರಾಯ ಪುರಂದರ ವಿಠಲನ ದಾಸನಾದ್ಯೋ ಮಧ್ವರಾಯ ||
ದಾಸ ಸಾಹಿತ್ಯ ಪ್ರಕಾರ
ಬರೆದವರು