ಮಾತಿಗೆ ಬಾರದ ವಸ್ತು

ಮಾತಿಗೆ ಬಾರದ ವಸ್ತು

(ರಾಗ ಕಾಂಭೋಜಿ. ಝಂಪೆ ತಾಳ ) ಮಾತಿಗೆ ಬಾರದ ವಸ್ತು ಬಹಳಿದ್ದರೇನು ಹೋತಿನ ಕೊರಳೊಳಗೆ ಮೊಲೆ ಇದ್ದರೇನು ತಾನು ಉಣ್ಣದ ದ್ರವ್ಯ ತಾಳ್ಯುದ್ದ ಇದ್ದರೇನು ದಾನವಿಲ್ಲದ ಮನೆಯು ದೊಡ್ಡದಾದರೇನು ಹೀನ ಗುಣವುಳ್ಳವಗೆ ಹಿರಿಯತನ ಬಂದರೇನು ಶ್ವಾನನ ಮೊಲೆಯೊಳಗೆ ಹಾಲಿದ್ದರೇನು ಆದರಿಲ್ಲದ ಊಟ ಅಮೃತಾನ್ನವಿದ್ದೇನು ವಾದಿಸುವ ಸತಿಸುತರು ಇದ್ದು ಬಲವೇನು ಕ್ರೋಧವನು ಮಾಡುವ ಸಹೋದರರು ಇದ್ದರೇನು ಮಾದಿಗರ ಮನೆಯಲ್ಲಿ ಮದುವ್ಯಾದರೇನು ಹೋಗದೂರಿನ ದಾರಿ ಕೇಳಿ ಮಾಡುವುದೇನು ಯೋಗಿಯ ಕೂಡ ಪರಿಹಾಸ್ಯವೇನು ರಾಗದಲಿ ಪುರಂದರ ವಿಠಲನ್ನ ನೆನೆಯದವ ಯೋಗ್ಯಾದರೇನವನು ಭೋಗ್ಯಾದರೇನು
ದಾಸ ಸಾಹಿತ್ಯ ಪ್ರಕಾರ
ಬರೆದವರು