ಬಣ್ಣಿಸಿ ಗೋಪಿ ಹರಸಿದಳು

(ರಾಗ ಧನ್ಯಾಸಿ. ಆದಿ ತಾಳ) ಬಣ್ಣಿಸಿ ಗೋಪಿ ಹರಸಿದಳು ಎಣ್ಣೆಯನೊತ್ತುತ ಯದುಕುಲ ತಿಲಕನಿಗೆ ಆಯುಷ್ಯವಂತನಾಗು ಅತಿ ಬಲ್ಲಿದನಾಗು ಮಾಯದ ಖಳರ ಮರ್ದನನಾಗು ರಾಯರ ಪಾಲಿಸು ರಕ್ಕಸರ ಸೋಲಿಸು ವಾಯುಸುತಗೆ ನೀನೊಡೆಯನಾಗೆನುತ ಧೀರನು ನೀನಾಗು ಅಚ್ಯುತ ನೀನಾಗು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಬಗೆಬಗೆ ಆಟಗಳೆಲ್ಲಿ

(ರಾಗ ಕೇದಾರಗೌಳ. ಆದಿ ತಾಳ) ಬಗೆಬಗೆ ಆಟಗಳೆಲ್ಲಿ ಕಲಿತೆಯ್ಯ ಜಗವ ಮೋಹಿಪನೆ ||ಪ|| ಖಗವರಗಮನ ಅಗಣಿತಮಹಿಮ ಜಗದವರೊಳು ನೀ ಮಿಗಿಲಾಗೀ ಪರಿ ||ಅ.ಪ|| ಒಬ್ಬಳ ಬಸಿರಿಂದಲಿ ಬಂದು ಮ- ತ್ತೊಬ್ಬಳ ಕೈಯಿಂದಲಿ ಬೆಳೆದು ಕೊಬ್ಬಿದ ಭೂಭಾರವನಿಳುಹಲು ಇಂಥ ತಬ್ಬುಬ್ಬಿದಾಟಗಳೆಲ್ಲಿ ಕಲಿತೆಯ್ಯ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಆರ ಹಾರೈಸಿದರೇನುಂಟು

(ರಾಗ ಮಧ್ಯಮಾವತಿ. ಆದಿ ತಾಳ.) ಆರ ಹಾರೈಸಿದರೇನುಂಟು, ಬರೆ ನೀರ ಕಡೆದರಲ್ಲೇನುಂಟು ಅಂತರವರಿಯದ ಅಧಮನ ಬಾಗಿಲ ನಿಂತು ಕಾಯ್ದರಲ್ಲೇನುಂಟು ಇಂತೆರದಲ್ಲಿಯು ಬಳಲಿಸಿ ತಾ ಯಮ- ನಂತೆ ಕೊಲುವನಲ್ಲೇನುಂಟು ಕೊಟ್ಟುದ ಕೊಂಡುದ ಹೇಳನ ಮಾಡೋ ಕ- ನಿಷ್ಠನ ಸೇರಿದರೇನುಂಟು
ದಾಸ ಸಾಹಿತ್ಯ ಪ್ರಕಾರ
ಬರೆದವರು

ವೀರ ಹನುಮ ಬಹು ಪರಾಕ್ರಮ

(ರಾಗ ಆನಂದಭೈರವಿ. ಅಟ ತಾಳ) ವೀರ ಹನುಮ ಬಹು ಪರಾಕ್ರಮ ||ಪ|| ಸಜ್ಞಾನವಿತ್ತು ಪಾಲಿಸೆನ್ನ ಜೀವರೋತ್ತಮ ||ಅ.ಪ|| ರಾಮ ದೂತನೆನಿಸಿ ಕೊಂಡೆ ನೀ, ರಾಕ್ಷಸರ ವನವನೆಲ್ಲ ಕಿತ್ತು ಬಂದೆ ನೀ ಜಾನಕಿಗೆ ಮುದ್ರೆಯಿತ್ತು ಜಗತಿಗೆಲ್ಲ ಹರ್ಷವಿತ್ತು
ದಾಸ ಸಾಹಿತ್ಯ ಪ್ರಕಾರ
ಬರೆದವರು

ವೆಂಕಟರಮಣ ವೇದಾಂತ

(ರಾಗ ಆರಭಿ. ಅಟ ತಾಳ) ವೆಂಕಟರಮಣ ವೇದಾಂತ ನಿನ್ನಯ ಪಾದ ಪಂಕಜ ಕಂಡ ಮೇಲೆ ಮಂಕು ಮಾನವರ ಬೇಡಿಸುವುದುಚಿತವೆ ಶಂಖಚಕ್ರಾಂಕಿತನೆ ||ಪ|| ಕ್ಷೀರ ಸಾಗರವ ಪೊಂದಿದವ ಮಥಿಸಿದ ನೀರು ಮಜ್ಜಿಗೆ ಕಾಣನೆ? ಚಾರು ಕಲ್ಪವೃಕ್ಷದಡಿಯಲ್ಲಿ ಕುಳಿತವಗೆ ದೋರೆ ತಿಂತ್ರಿಣಿ ಬಯಕೆಯೆ?
ದಾಸ ಸಾಹಿತ್ಯ ಪ್ರಕಾರ
ಬರೆದವರು

ವಾಸುದೇವನ ಚರಣವನಜ

(ರಾಗ ನಾಟ. ಅಟ ತಾಳ) ವಾಸುದೇವನ ಚರಣವನಜ ವಂದಿಪನೆ , ಸಂ- ನ್ಯಾಸ ರತ್ನಾಕರನೆ ವ್ಯಾಸಮುನಿರಾಯ ವಾದಿಗಜಸಿಂಹ ದುರ್ವಾದಿ ಮೃಗ ಭೇರುಂಡ ಮಾಯಾ- ವಾದಿ ಫಣಿ ಗರುಡ ತತ್ವಾದಿರಚಿತ ವಾದಿ ಭಯಂಕರ ದುರ್ವಾದಿ ಕೋಲಾಹಲ ವಾದಿ ಮಸ್ತಕ ಶೂಲ ಮಧುರ ಗುಣಶೀಲ
ದಾಸ ಸಾಹಿತ್ಯ ಪ್ರಕಾರ
ಬರೆದವರು

ಉಣಲೊಲ್ಲೆ ಯಾಕೋ

(ರಾಗ ಯದುಕುಲಕಾಂಭೋಜಿ. ಝಂಪೆ ತಾಳ.) ಉಣಲೊಲ್ಲೆ ಯಾಕೋ ಕಂದ , ಆವ ಗೋವಳತಿಯರ ಕಣ್ಣು ದೃಷ್ಟಿ ತಾಗಿತಯ್ಯ ||ಪ|| ಅನುದಿನ ನಮ್ಮೆಲ್ಲರ ಅಗಲಬಾರದು ಎಂದು ಮನಸೋತು ಗೋಪಿಯರು ಮೆಚ್ಚಿ ಮದ್ದಿಕ್ಕಿದರೆ ||ಅ. ಪ|| ಅಸುರೆ ಪೂತನಿಯಿತ್ತ ವಿಷದ ಮೊಲೆಗಳನುಂಡು
ದಾಸ ಸಾಹಿತ್ಯ ಪ್ರಕಾರ
ಬರೆದವರು

ದಾರ ಮಗನಮ್ಮ

(ರಾಗ ಬೇಗಡ. ಚಾಪು ತಾಳ) ದಾರ ಮಗನಮ್ಮ, ರಂಗಯ್ಯ ದಾರ ಮಗನಮ್ಮ ದಾರಿಯ ನೋಡುತ್ತ ದಾರು ಈತನ ದಾರು ತಿಳಿಯದು ಅರವಿಂದಾನನೆ ಕೇಳ್ ಅರ ಮೊರೆಯಾದರೆ ಅರಿಯದಂದದಿ ಬಂದು ಅ- ಧರ ಮುದ್ದಾಡಿದ ಕಾಂತೆ ಕೇಳ್ ಏ- ಕಾಂತದಿ ಮಲಗಿದೇ ಕಾಂತನಾಗಿ ಏ- ಕಾಂತಕ್ಕೆ ಕರೆತಾರೆ ನಾರಿ ಕೇಳೆ ಅಕ್ಕ
ದಾಸ ಸಾಹಿತ್ಯ ಪ್ರಕಾರ
ಬರೆದವರು

ದಾನವನ ಕೊಂದದ್ದಲ್ಲ!

(ರಾಗ ತೋಡಿ. ಆದಿ ತಾಳ) ದಾನವನ ಕೊಂದದ್ದಲ್ಲ ಕಾಣಿರೋ ||ಪ|| ಗಾನ ವಿನೋದಿ ನಮ್ಮ ತೊರೆವೆಯ ನರಸಿಂಹ ||ಅ.ಪ|| ಅಚ್ಚ ಪುರುಷನೆಂಬ ಸ್ವಚ್ಚ ರತ್ನ ಒಡಲೊಳು ಬಿಚ್ಚಿ ನೋಡಿದರಿನ್ನೆಷ್ಟು ಇದ್ದಾವೊ ಎಂದು ನೆಂಟತನವು ಬೆಳೆಯ ಬೇಕೆಂದು ಕರುಳ ಕೊರಳೊಳು
ದಾಸ ಸಾಹಿತ್ಯ ಪ್ರಕಾರ
ಬರೆದವರು

ಚಿತ್ತೈಸಿದ ವ್ಯಾಸರಾಯ

(ರಾಗ ಭೈರವಿ. ಅಟ ತಾಳ) ಚಿತ್ತೈಸಿದ ವ್ಯಾಸರಾಯ ಚಿತ್ತಜನಯ್ಯನ ಸಭೆಗೆ ||ಪ|| ನಿತ್ಯ ಮುತ್ತೈದೆಯರೆಲ್ಲ ಎತ್ತೆ ರತುನದಾರತಿಯ ||ಅ.ಪ|| ಹೇಮ ಮಯವಾದ ದಿವ್ಯ ವ್ಯೋಮಯಾನವನ್ನೆ ಏರಿ ಸ್ವಾಮಿ ವ್ಯಾಸರಾಯ ಪೊರಟ ಪ್ರೇಮದಿ ಹರಿಪುರಕೆ ಹಾಟಕದ ಬೆತ್ತಕೋಟಿ ಸಾಟಿ ಇಲ್ಲದೆ ಪಿಡಿದು
ದಾಸ ಸಾಹಿತ್ಯ ಪ್ರಕಾರ
ಬರೆದವರು