ಇದು ಏನೋ ಚರಿತ...

ಇದು ಏನೋ ಚರಿತ...

ಇದು ಏನೋ ಚರಿತ ಯಂತ್ರೋದ್ಧಾರ ಇದು ಏನೋ ಚರಿತ ಶ್ರೀಪದುಮನಾಭನ ದೂತ ಸದಾ ಕಾಲದಲಿ ಸರ್ವರ ಹೃದಯಾಂತರ್ಗತ ವಾರಿಧಿ ಗೋಷ್ಪಾದನೀರಂತೆ ದಾಟಿದ ಧೀರ ಯೋಗಾಸನಧಾರಿಯಾಗಿಪ್ಪೋದು ದುರುಳ ಕೌರವರನ್ನು ವರಗದೆಯಲಿ ಕೊಂದ ಕರದಲ್ಲಿ ಜಪಮಾಲೆ ಧರಿಸಿ ಎಣಿಸುವದು ಹೀನ ಮತಗಳನ್ನು ವಾಣಿಲಿ ತರಿದಂಥ ಜ್ಞಾನವಂತನೆ ಹೀಗೆ ಮೌನವ ಧರಿಸಿದ್ದು ಸರ್ವವ್ಯಾಪಕ ನೀನು ಪೂರ್ವಿಕ ದೇವನೆ ಶರ್ವನ ಪಿತ ಬಂದೀ ಪರ್ವತ ಸೇರಿದ್ದು ಗೋಪಾಲವಿಠಲಗೆ ನೀ ಪ್ರೀತಿ ಮಂತ್ರಿಯು ವ್ಯಾಪಾರ ಮಾಡದೆ ಈ ಪರಿ ಕುಳಿತದ್ದು
ದಾಸ ಸಾಹಿತ್ಯ ಪ್ರಕಾರ
ಬರೆದವರು