ಏಕೆ ವೃಂದಾವನ ಸಾಕು ಗೋಕುಲವಾಸ

ಏಕೆ ವೃಂದಾವನ ಸಾಕು ಗೋಕುಲವಾಸ

( ರಾಗ ಮೋಹನ. ಝಂಪೆ ತಾಳ) ಏಕೆ ವೃಂದಾವನ ಸಾಕು ಗೋಕುಲವಾಸ ಏಕೇ ಬಂದೆಲೊ ಉದ್ಧವ ಸಾಕು ಸ್ನೇಹದ ಮಾತನೇಕಮಹಿಮನು ತಾನು ಆ ಕುಬುಜೆಯನು ಕೂಡಿದ, ಉದ್ಧವ ||ಪ|| ಬಿಲ್ಲು ಬಿಳಿನಯ್ಯನ ಬೇಟೆ ನಗೆ ನುಡಿ ನೋಟ ಇಲ್ಲದಂತಾಯಿತಲ್ಲ ಎಲ್ಲರಿಂದಗಲಿಸಿದ ಕ್ರೂರ ಅಕ್ರೂರನು ವಲ್ಲಭನ ಒಯ್ದನಲ್ಲ | ಮಲ್ಲರನು ಮರ್ದಿಸುತ ಮಾವ ಕಂಸನ ಕೊಂದ ಮಾಧವನ ತಂದು ತೋರಿಸೈ, ಉದ್ಧವ || ಅನುದಿನದೊಳಾದರಿಸಿ ಅಧರಾಮೃತವನಿತ್ತು ಇನಯವದನನು ಮಾತಿಲಿ ಮನಸು ಮರ್ಮವ ತಿಳಿದ ಮನಸಿಜಪಿತನ ಸುಖವು ಮನಸಿಜನ ಕೇಳಿಯಲ್ಲಿ | ಕನಸಿನಲಿ ಕಂಡ ತೆರನಾಯಿತಾತನ ಕಾಣದೆ ಬದುಕುವ ಭರವಸೆ, ಹೇ ಉದ್ಧವ || ಕರುಣನಿಧಿಯೆಂಬೋರು ಕಪಟನಾಟಕದರಸು ಸರಸ ವಿರಸವ ಮಾಡಿದ ಸ್ಮರಿಸಿದವರನು ಕಾಯ್ವ ಬಿರುದುಳ್ಳ ಶ್ರೀ ರಮಣ ಮರೆತು ಮಧುರೆಯ ಸೇರಿದ ಪರಮ ಭಕ್ತರ ಪ್ರೀಯ ಪುರಂದರವಿಠಲನ ಒಡಗೂಡಿಸೈ ಕೋವಿದ, ಉದ್ಧವ ||
ದಾಸ ಸಾಹಿತ್ಯ ಪ್ರಕಾರ
ಬರೆದವರು