ಏಕೆ ನಿನಗಿಷ್ಟು ಗಂಜಾಲ

ಏಕೆ ನಿನಗಿಷ್ಟು ಗಂಜಾಲ

( ರಾಗ ಗೌಳಪಂತುವರಾಳಿ ಅಟತಾಳ / ಕಾಮವರ್ಧಿನಿ. ಛಾಪು ತಾಳ) ಏಕೆ ನಿನಗಿಷ್ಟು ಗಂಜಾಲ, ಬಿಡೊ ಹರಿಯೆ ||ಪ|| ಚಿಕ್ಕವನೆಂದು ನೀ ಠಕ್ಕು ಮಾಡಲುಬೇಡ ಕಕ್ಕಸಕುಚಗಳ ಕೈಲಿ ಕೊಡುವವಳಲ್ಲ || ಸದರ ಬೇಡ ನಿನ್ನ ಬಗೆಯೆಲ್ಲ ನಾ ಬಲ್ಲೆ ಬೆದರಿಸಿದರೆ ನಾನು ಅಂಜುವ ಹೆಣ್ಣಲ್ಲ || ಸಾಕು ನಿನ್ನ ಸರಸ ಸಲ್ಲಾಪವು, ಬೆರೆಯ ಬೇಕೆಂದು ಬರುವೆನು ಪುರಂದರವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು