ದೃಷ್ಟಿ ತಾಗಿತೆ

ದೃಷ್ಟಿ ತಾಗಿತೆ

( ರಾಗ ಧನಶ್ರೀ ಆದಿ ತಾಳ) ದೃಷ್ಟಿ ತಾಗಿತೆ ನಮ್ಮ ಕೃಷ್ಣರಾಯಗೆ ||ಪ|| ಸೃಷ್ಟಿಯಲಿ ನಾರಿಯರು ಕಣ್ಣಿಟ್ಟು ಹೀರುವರು ಕಾಣೆ ||ಅ|| ಬಿಟ್ಟ ಕಣ್ಣ ಮುಚ್ಚಲಿಲ್ಲ ಮುಟ್ಟಗೊಡ ಬೆನ್ನಮುಳ್ಳ ಇಷ್ಟು ಗಂಟಲೊಳು ಗುರು- ಗುಟ್ಟಿ ಗುಟ್ಟಿತೇ ನಮ್ಮ || ತೆರೆದ ಬಾಯ ಮುಚ್ಚಲಿಲ್ಲ ಕಿರಿದಾಯಿತು ತನುವಿದೆಲ್ಲ ಭರದಿ ಪೆತ್ತ ತಾಯ ಕಂಡರೆ ಸೇರಲೊಲ್ಲನೆ || ಅನ್ನವನ್ನು ಉಣಲಿಲ್ಲ ಎನ್ನ ಮನೆ ಬೆಣ್ಣೆಯೆಲ್ಲ ಚೆನ್ನ ವಸ್ತ್ರ ಹೊದಿಸಲು ತಾನೊಲ್ಲನೆ || ರಾಜರಾಜರಲ್ಲಿ ತೇಜಿ ಮಾಜಿ ರಥವ ನಡೆಸಿ ಮಾಜಿ ವಾಜಿಯನ್ನು ಹತ್ತು ಎಂದರೆ ಯಾಕೆ ಒಲ್ಲನೆ || ಅರಿತವರ್ಯಾರು ಮಂತ್ರತಂತ್ರ ಕರೆದು ಭಸಿತ ಹಾಕಿರಮ್ಮ ಧರೆಯೊಳು ಪುರಂದರವಿಠಲನ ಸ್ಮರಣೆ ಮಾಡಿದರಿಂದ ||
ದಾಸ ಸಾಹಿತ್ಯ ಪ್ರಕಾರ
ಬರೆದವರು