ಆಗಲೇ ಕಾಯಬೇಕೋ

ಆಗಲೇ ಕಾಯಬೇಕೋ

( ರಾಗ ಸಾವೇರಿ. ಛಾಪು ತಾಳ) ಆಗಲೇ ಕಾಯಬೇಕೋ ಅಂಬುಜಾಕ್ಷನೆ ಎನ್ನ ||ಪ|| ಈಗ ನೀ ಕಾಯ್ದರೇನೊ , ಕಾಯದಿದ್ದರೆ ಏನೊ ||ಅ|| ಅನುಜತನುಜರುಂಟು ಬಹು ಹಣವೊಳಗುಂಟು ಚಿನ್ನ ಚೀನಾಂಬರವುಂಟು ಉಪ್ಪರಿಗೆಯುಂಟು ಮೊನ್ನೆ ಹುಟ್ಟಿದ ಗಂಡು ಮಗನೊಬ್ಬನೆನಗುಂಟು ಸನ್ನೆ ಸಂಜ್ಞೆಗುಂದಿದಾಗ ಸಂಗಡ ಒಬ್ಬರ ಕಾಣೆ || ನೆಂಟರಿಷ್ಟರು ಉಂಟು ನೆರೆ ಹೊರೆ ಎನಗುಂಟು ಬಂಟಬಳಗವುಂಟು ಭಾಗ್ಯವುಂಟು ಕಂಠದಲ್ಲಿ ಬದ್ಧರಾದ ಕಾಂತೆಯರೆನಗುಂಟು ಒಂಟಿಯಾಗಿ ಪೋಗುವಾಗ ಸಂಗಡ ಒಬ್ಬರ ಕಾಣೆ || ಒಂದು ಕ್ಷಣದಲ್ಲಿ ವಾತ ಪಿತ್ತ ಕಫ ಮೊದಲಾಗಿ ಸಂಧಿವ್ಯಾಧಿಗಳಿಷ್ಟು ಬಾಧಿಸುತಿರೆ ಇಂದಿರೇಶ ನಿನ್ನ ನಾಮವೊಂದೇ ಕಾಯುವುದಕೆ ಬಂದೆನ್ನ ಸಲಹಯ್ಯ ಪುರಂದರವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು