ಎಂದೆಂದು ನಿನ್ನ ಪಾದವೆ

ಎಂದೆಂದು ನಿನ್ನ ಪಾದವೆ

( ರಾಗ ಕಾಂಭೋಜ ತ್ರಿಪುಟ ತಾಳ) ಎಂದೆಂದು ನಿನ್ನ ಪಾದವೆ ಗತಿಯೆನಗೆ ಗೋ- ವಿಂದ ಬಾರಯ್ಯ ಎನ್ನ ಹೃದಯಮಂದಿರಕೆ ||ಪ|| ಮೊದಲಿಂದ ಬರಬಾರದೆ ನಾ ಬಂದೆ ಇದರಿಂದ ಗೆದ್ದು ಪೋಗುವುದು ಕಾಣೆ ಮುಂದೆ ತುದಿ ಮೊದಲಿಲ್ಲದೆ ಪರರಿಂದ ನೊಂದೆ ಪದುಮನಾಭನೆ ತಪ್ಪು ಕ್ಷಮೆ ಮಾಡೊ ತಂದೆ || ಹೆಣ್ಣು ಹೊನ್ನು ಮಣ್ಣಿನಾಸೆಗೆ ಬಿದ್ದು ಪುಣ್ಯಪಾಪವನು ನಾ ತಿಳಿಯದೆ ಇದ್ದು ಅನ್ಯಾಯವಾಯಿತು ಇದರೇನು ಮದ್ದು ನಿನ್ನ ಧ್ಯಾನ ಎನ್ನ ಹೃದಯದೊಳಿದ್ದು || ಹಿಂದೆ ನಾ ಮಾಡಿದ ಪಾಪವ ಕಳೆಯೆ ಮುಂದೆನ್ನ ಜನ್ಮ ಸಫಲ ಮಾಡಿ ಪೊರೆಯೆ ತಂದೆ ಪುರಂದರ ವಿಠಲನ್ನ ನೆರೆಯೆ ಎಂದೆಂದಿಗಾನಂದ ಸುಖವನ್ನೆ ಕರೆಯೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು