ಧನ್ಯನಾದೆ ನಾನೀ ಜಗದೊಳು

ಧನ್ಯನಾದೆ ನಾನೀ ಜಗದೊಳು

( ರಾಗ ರೇಗುಪ್ತಿ. ಆದಿ ತಾಳ) ಧನ್ಯನಾದೆ ನಾ-ನೀ ಜಗದೊಳು ಧನ್ಯನಾದೆ ನಾ ||ಪ|| ಪನ್ನಗ ಶಯನನ ಕಣ್ಣಿನಿಂದಲಿ, ಕಂಡು ಧನ್ಯನಾದೆ ನಾ ||ಅ|| ಉನ್ನತಮಹಿಮ ಪಾ-ವನ್ನಚರಿತ ಸುರಸನ್ನುತಚರಂಅನವ ಪನ್ನಗಾರಿವ-ಹನ್ನ ಪುರುಷರನ್ನ, ಚೆನ್ನಿಗ ಶ್ರೀರಂಗನ ಮಹಿಮೆಯ, ಕಂಡು || ದೇವದೇವೋತ್ತಮ, ಕಾವ ನಮ್ಮ ಈಗ, ಭಾವಜನಯ್ಯನು ಕಾವೇರಿ ತೀರದ, ಉತ್ತಮ ಕ್ಷೇತ್ರದೊಳು ,ಪಾವನ ನರಸಿಂಗನ, ಕಂಡು || ಭಾನುಕೋಟಿಪ್ರಭ, ಸ್ವಾನಂದಪೂರ್ಣನ, ದೀನ ರಕ್ಷಕನ ಸಿರಿಪುರಂದ-ರವಿಠಲ ಚೆನ್ನಿಗ, ಶ್ರೀರಂಗನ ಮಹಿಮೆಯ ಕಂಡು ||
ದಾಸ ಸಾಹಿತ್ಯ ಪ್ರಕಾರ
ಬರೆದವರು