ಗುಡುಗುಡಿಯನು ಸೇದಿ ನೋಡೊ

ಗುಡುಗುಡಿಯನು ಸೇದಿ ನೋಡೊ

( ರಾಗ ಪುನ್ನಾಗವರಾಳಿ. ಆದಿ ತಾಳ) ಗುಡುಗುಡಿಯನು ಸೇದಿ ನೋಡೊ ಸೇದಿ ನೋಡೊ ||ಪ|| ನಿನ್ನ ಒಡಲ ಪಾಪಂಗಳನೆಲ್ಲ ಈಡಾಡೋ ||ಅ|| ಮನವೆಂಬೊ ಸಂಚಿಯ ಬಿಚ್ಚಿ, ನಿನ್ನ ದಿನದ ಪಾಪಗಳೆಂಬೊ ಭಂಗಿಯ ಕೊಚ್ಚಿ ತನುವೆಂಬೊ ಚಿಲುಮೆಯೊಳಿಕ್ಕಿ, ಅಚ್ಯು- ತನ ಧ್ಯಾನವೆಂತೆಂಬೊ ಬೆಂಕಿಯ ಹಚ್ಚಿ || ಬುರುಡೆಯೆಂಬೋದು ಈ ಶರೀರ, ನಿನ್ನ ಗುರುಭಕ್ತಿಯೆಂಬೋದೆ ಕೊಳವಿಯಾಕಾರ ಸಿರಿನಾರಾಯಣನೆಂಬೊ ನೀರ, ಅದ- ನರಿತು ತುಂಬಿಕೊಳ್ಳೊ ಎಲ ಮೋಜುಗಾರ || ಸತ್ಯದಿಂದಮಲು ಏರುವುದು, ದಾ- ರಿದ್ರ್ಯ ದೋಷವು ಸುಟ್ಟು ಹೊಗೆಯು ಹಾರುವುದು ಬುದ್ಧಿಗೆ ಜ್ಞಾನ ತೋರುವುದು, ಗುರು ಮಧ್ವೇಶ ಪುರಂದರವಿಠಲನ ತೋರುವುದು ||
ದಾಸ ಸಾಹಿತ್ಯ ಪ್ರಕಾರ
ಬರೆದವರು