ಗೋವಿಂದಾ ನಿನ್ನಾನಂದ

ಗೋವಿಂದಾ ನಿನ್ನಾನಂದ

( ರಾಗ ಮಧ್ಯಮಾವತಿ. ಆದಿ ತಾಳ) ಗೋವಿಂದಾ ನಿನ್ನಾನಂದ ಸಕಲ ಸಾಧನವು ||ಪ|| ಅಣುರೇಣು ತೃಣಕಾಷ್ಟ ಪರಿಪೂರ್ಣ ಗೋವಿಂದ ನಿರ್ಮಲಾತ್ಮಕನಾಗಿ ಇರುವುದೆ ಆನಂದ || ಸೃಷ್ಟಿಸ್ಥಿತಿಲಯಕಾರಣ ಗೋವಿಂದ ಈ ಪರಿ ಮಹಿಮೆಯ ತಿಳಿಯುವುದೆ ಆನಂದ || ಮಂಗಳಮಹಿಮ ಶ್ರೀ ಪುರಂದರವಿಠಲ ಹಿಂಗದೆ ದಾಸರ ಸಲಹುವದೆ ಆನಂದ ||
ದಾಸ ಸಾಹಿತ್ಯ ಪ್ರಕಾರ
ಬರೆದವರು