ಗೋವಿಂದನ ಧ್ಯಾನ ಬಲು ಶುಭಕರವೋ

ಗೋವಿಂದನ ಧ್ಯಾನ ಬಲು ಶುಭಕರವೋ

( ರಾಗ ಶಹಾನ. ಆದಿ ತಾಳ) ಗೋವಿಂದನ ಧ್ಯಾನ ಬಲು ಶುಭಕರವೋ ||ಪ|| ಭಾವಿಸಿ ನೋಡಲು ಬಹು ಜನ್ಮಗಳ ಪಾಪಹರವೋ || ಒಂದಾವರ್ತಿ ನೆನೆಯಲು ಭವಬಂಧ ಖಿಲವೋ ಹಿಂದಿನ ಸುಕೃತಕೆ ಮುಂದಿನ ಸುಕೃತಾನಂದ ಫಲವೋ || ವಿಧವಿಧ ಸಾಧನಕಿಂತ ಇದು ಘನವೋ ಉದರಂಭರಣಕ್ಕೆ ಉಡುವೋ ವಸನಕ್ಕೆ ಇದು ಸುಸಾಧವನವೋ || ಶ್ರೀರಾಮಪುರಂದರವಿಠಲ ಆರಪಾರವೋ ಸೇರಿದವರಿಗೆ ಈ ಹರಿಧ್ಯಾನ ಕ್ರೂರಗೆ ದೂರವೋ ||
ದಾಸ ಸಾಹಿತ್ಯ ಪ್ರಕಾರ
ಬರೆದವರು