ಏನು ವ್ರತವೇನು ಸಾಧನಗಳೇನೊ

ಏನು ವ್ರತವೇನು ಸಾಧನಗಳೇನೊ

( ರಾಗ ಕಾಂಭೋಜ. ಅಟ ತಾಳ) ಏನು ವ್ರತವೇನು ಸಾಧನಗಳೇನೊ || ಸ್ವಾನುಭವದಜ್ಞಾನ ಹೀನ ಮಾನವನೆ ||ಅ|| ಶಾಕವ್ರತವೆನುತ ಫಲ ಶಾಕಗಳ ಬಿಡುವಂತೆ ಬೇಕಾದ ಆಕಾಂಕ್ಷೆ ಬಿಡಬಾರದೆ ಸಾಕೆನಿಸಿದೆ ರತಿಗೆ ಸತತ ಮನ ಕೊಡುವಂತೆ ಶ್ರೀಕಾಂತನೊಳು ಮನವನಿಡಬಾರದೆ || ನೇಮಗಳ ಮಾಡಿ ಪರಪಾಕವನು ಬಿಡುವಂತೆ ಕಾಮ ಕ್ರೋಧಂಗಳನು ಬಿಡಬಾರದೆ ತಾಮಸರ ಕಣ್ಣಿಂದ ನೋಡೆನೆಂಬುವ ನಿಷ್ಠೆ- ನೇಮವನು ಪರಸತಿಯೊಳಿಡಬಾರದೆ || ಹೇಸಿ ದುರ್ಗಂಧಗಳಿಗೋಸರಿಸುವಂದದಲಿ ಆಶಾಪಾಶಾದಿಗಳ ಬಿಡಬಾರದೆ ಈಶ ಶ್ರೀ ಪುರಂದರವಿಟ್ಠಲನ ಸೇವೆಯೇ ಲೇಸೆನುತ ಸಂತೋಷಿಸಲು ಬಾರದೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು