ಹರಿ ಹರರು ಸಮರೆಂದು ಅರಿಯದಜ್ಞಾನಿಗಳು

ಹರಿ ಹರರು ಸಮರೆಂದು ಅರಿಯದಜ್ಞಾನಿಗಳು

( ರಾಗ ಕಾಂಭೋಜ. ಝಂಪೆ ತಾಳ) ಹರಿ ಹರರು ಸಮರೆಂದು ಅರಿಯದಜ್ಞಾನಿಗಳು ಹರನ ಹೃದಯದೊಳಿರುವ ಹರಿಯ ತಾವರಿಯರು ||ಪ|| ಶರಧಿ ಮಥನದೊಳಂದು ಸಿಂಧುಸುತೆ ಬಂದಾಗ ಹರಿ ಹರ ವಿರಿಂಚಿ ಮೊದಲಾದ ಸುರರ ವರರಾರೆಂದು ನೋಡಿ ಶಂಕೆಯ ಬಿಟ್ಟು ಸಿರಿದೇವಿ ಹರಿ ಸರ್ವವರನೆಂದು ಮಾಲೆ ಹಾಕಿದಳು || ಹರಿನಾಮ ಕ್ಷೀರವನು ಹರನಾಮ ನೀರನು ಕ್ಷೀರ ನೀರೊಂದಾದುದಂತೆ ಇಹದು ಪರರು ಪರ ತತ್ವವರಿಯದ ನರ ತಾನು ಹರಿಹರರು ಸರಿಯೆಂದು ನರಕಕ್ಕೆ ಒಳಗಾಗುತಿಹನು || ಕ್ಷೋಣಿಯೊಳು ಬಾಣನಾ ತೋಳುಗಳ ಕಡಿವಾಗ ಏಣಾಂಕಧರ ಬಾಗಿಲೊಳಗೆ ಇರಲು ಕಾಣಿಪರೆ ಜನರೆಲ್ಲ ಹರಿಪರನು ತಾನೆಂದು ಗುಣಪೂರ್ಣ ಪುರಂದರ ವಿಟ್ಠಲನು ಪರನು ||
ದಾಸ ಸಾಹಿತ್ಯ ಪ್ರಕಾರ
ಬರೆದವರು