ಸುಮ್ಮನೆ ಬರುವದೆ ಮುಕ್ತಿ

ಸುಮ್ಮನೆ ಬರುವದೆ ಮುಕ್ತಿ

(ರಾಗ ಆನಂದಭೈರವಿ ಅಟ ತಾಳ) ಸುಮ್ಮನೆ ಬರುವದೆ ಮುಕ್ತಿ ||ಪ|| ನಮ್ಮ ಅಚ್ಯುತಾನಂತನ ನೆನೆಯದೆ ಭಕ್ತಿ ||ಅ.ಪ|| ಮನದಲ್ಲಿ ದೃಢವಿರಬೇಕು, ಪಾಪಿ ಜನರ ಸಂಸರ್ಗವ ನೀಗಲುಬೇಕು ಅನುಮಾನವನು ಬಿಡಬೇಕು, ತನ್ನ ತನು ಮನಧನವನೊಪ್ಪಿಸಿಕೊಡಬೇಕು ಕಾಮಕ್ರೋಧವ ಬಿಡಬೇಕು, ಪರ- ಕಾಮಿನಿಯರ ಹಂಬಲ ಬಿಡಬೇಕು ಹೇಮದಾಸೆಯ ಸುಡಬೇಕು, ಹರಿ- ನಾಮ ಸಂಕೀರ್ತನೆಯನು ಮಾಡಬೇಕು ಸಂದಣಿಗಳ ಬಿಡಬೇಕು, ದೇಹ ಬಂಧುಬಾಂಧವರ ಸ್ನೇಹವ ಬಿಡಬೇಕು ನಿಂದಿಸಿದರೆ ಹಿಗ್ಗಬೇಕು, ಕೋಪ ಬಂದಾಗ ಸೈರಣೆ ಬಿಡದಿರಬೇಕು ಹರಿಯೇ ಗುರುವೆನ್ನಬೇಕು, ಶ್ರೀ- ಹರಿಯೇ ಪರದೈವವೆಂತೆನ್ನಬೇಕು ಪರವಸ್ತು ಒಲ್ಲೆನಬೇಕು, ದೇಹ ಸ್ಥಿರವಲ್ಲವೆಂತೆಂದು ತಿಳಿಯಲುಬೇಕು ವ್ಯಾಪಾರವನು ಬಿಡಬೇಕು, ನಮ್ಮ ಶ್ರೀಪತಿ ಪುರಂದರವಿಠಲೆನ್ನ ಬೇಕು ಪಾಪರಹಿತನಾಗಬೇಕು, ಜ್ಞಾನ ದೀಪದ ಬೆಳಕಿಲಿ ಓಡಾಡಬೇಕು
ದಾಸ ಸಾಹಿತ್ಯ ಪ್ರಕಾರ
ಬರೆದವರು