ಸೋಹಮೆನ್ನ ಬೇಡವೋ

ಸೋಹಮೆನ್ನ ಬೇಡವೋ

(ರಾಗ ಅಠಾಣ ಅಟತಾಳ) ಸೋಹಮೆನ್ನ ಬೇಡೆಲೋ, ದಾ- ಸೋಹಮೆಂದು ಪೇಳೆಲೋ ||ಪ|| ಸೋಹಮೆಂಬೋ ಜ್ಞಾನದಿಂದ ಸಾಯಲಿಲ್ಲೇ ಹಿರಣ್ಯಕ, ದಾ- ಸೋಹಮೆಂಬ ಪ್ರಹ್ಲಾದ ದೇಹ ನಿತ್ಯ ಮುಕ್ತನಾದ ||ಅ.ಪ|| ನಾನೇ ದೈವವೆಂಬ ಮಾಲಿ ಸುಮಾಲಿ ರಾವಣ ದುಷ್ಟರು ದಾನವಾರಿ ಹರಿಯ ಜರೆದು ಹೇಗೆ ಪ್ರಾಣ ಬಿಟ್ಟರು ಜಾನಕೀಪತಿದಾಸನೆಂಬ ವಿಭೀಷನ ಸ್ಥಿತಿ ನೋಡಿಕೊಂಡು ಭಾನು ವಂಶಜ ದೀನಪೋಷಣ ರಾಮಸ್ಮರಣೆ ಮಾಡು ನೀ || ಶಿವನೆ ನಾನು ಎಂದು ಜಲಂಧರ ಭುವನಮಾತೆಯ ಮುಂದೆ ನಿಂದ ಅವನ ಹೆಂಡತಿ ಮಾನ ಕೆಡಿಸಿ ಕೊಂದೆಮಲೋಕವ ಹೊಂದಿದ ಧ್ರುವನ ಪಿತ ಕೈ ಬಿಡಲು ಶ್ರೀ ರಾಘವನ ಚರಣಗಳನ್ನು ಭಜಿಸಿ ಮಾ- ಧವನ ಕೈಯಲ್ಲಿರುವ ಲೋಕವ ಪಡೆದು ಸುಖಿಯಾಗಿರುವುದರಿಯ || ವಾಸುದೇವ ನಾನೆಂಬ ಪೌಂಡ್ರಕ ನಾಶವಾದನು ಮುಂದಿನಿಂದ ರೋಷದಿಂದಲಿ ದಾಸರಾಗದ ಅಸುರರಿಗೆ ಅಂತಕ ಭೂಸುರಪ್ರಿಯ ವಾಸುದೇವನು ದಾಸದಾಸರ ಪೋಷಕಾಗಿರೆ ಆಸೆಯಿಂದಲಿ ಭಜಿಸು ಶ್ರೀನಿವಾಸ ಪುರಂದರವಿಠಲನ ||
ದಾಸ ಸಾಹಿತ್ಯ ಪ್ರಕಾರ
ಬರೆದವರು