ಬಿಡೆ ನಿನ್ನ ಪಾದವ

ಬಿಡೆ ನಿನ್ನ ಪಾದವ

(ರಾಗ ಮೋಹನ ಅಟತಾಳ ) ಬಿಡೆ ನಿನ್ನ ಪಾದವ ಬಿಂಕವಿನ್ನೇಕೋ ಕೊಡು ಮನದೀಷ್ಟವ ಕೋಪವಿನ್ನೇಕೊ || ನೀರ ಪೊಕ್ಕರು ಬಿಡೆ ಬೆನ್ನಿನೊಳಗೆ, ಬಹು- ಭಾರ ಪೊತ್ತೆನೆಂದು ಬಿದ್ದರು ಬಿಡೆನು ಕೋರೆಯ ಮಸೆಯುತ ಕೆಸರು ಕೊಂಡರು ಬಿಡೆ ಘೋರರೂಪವ ತಾಳಿ ಘುರಿಘುರಿಸಲು ನಾನು || ತಿರುಕನೆಂದರು ಬಿಡೆ ತಿಳಿದು ತಾಯ ಕೊರಳ ತರಿಕನೆಂದರು ನಿನ್ನ ನಾ ಬಿಡೆನೋ ಪೊರೆಯೆ ಪಿತನ ವಾಕ್ಯ ಕಾಡ ಸೇರಲು ಬಿಡೆ ದುರುಳ ಮಡುವಿನಲಿ ಧುಮುಕಿದರೆಯು ನಾನು || ಕಡು ಬತ್ತಲಾಗಿ ಎನ್ನ ಕೈಲಿ ಕಾಸಿಲ್ಲೆಂದರು ಒಡನೆ ಹಯವೇರಿ ಓಡಿದರು ಬಿಡೆನು ಪೊಡವಿಯೊಳಗೆ ನಮ್ಮ ಪುರಂದರವಿಠಲನೆ ಕಡೆಹಾಯಿಸುವ ಭಾರ ನಿನ್ನದದಕೆ ನಾನು ||
ದಾಸ ಸಾಹಿತ್ಯ ಪ್ರಕಾರ
ಬರೆದವರು