ಕರವ ಮುಗಿದನು

ಕರವ ಮುಗಿದನು

(ರಾಗ ಕಾನಡ ತ್ರಿಪುಟತಾಳ ) ಕರವ ಮುಗಿದನು, ಮುಖ್ಯಪ್ರಾಣ ಕರವ ಮುಗಿದನು ||ಪ|| ಕರವ ಮುಗಿದ ಶ್ರೀ ಹರಿಯ ಇದಿರಾಗಿ ದುರುಳರ ಸದೆದು ಶರಣರ ಪೊರೆಯೆಂದು || ಅ.ಪ|| ಜೀವೇಶರೈಕ್ಯವು ಜಗತು ಮಿಥ್ಯವೆಂದು ಈ ವಿಧ ಪೇಳುವ ಮಾಯಿಗಳಳಿಯೆಂದು || ಇಲ್ಲಿ ಮಾತ್ರವು ಭೇದ , ಅಲ್ಲಿ ಒಂದೇ ಎಂಬ ಕ್ಷುಲ್ಲಕರನು ಪಿಡಿದ್ಹಲ್ಲು ಮುರಿಯೆಮ್ದು || ತಾರತಮ್ಯ ಪಂಚಭೇದ ಸತ್ಯವೆಂಬ ಮಾರುತಿಮತ ಪೊಂದಿದವರನು ಸಲಹೆಂದು || ಪರಿಪರಿ ಭಕ್ತರ ಹೃದಯದಲಿ ನಿಂದು ನಿರತ ಮಾಡುವ ಕರ್ಮ ಹರಿಗೆ ಅರ್ಪಿತವೆಂದು || ಹರಿ ಮಾಡೋ ವ್ಯಾಪಾರ ಬಲ್ಲ ಕಾರಣ ನಮ್ಮ ಪುರಂದರವಿಠಲನ ಚರಣಕ್ಕೆರಗಿ ನಿಂದು ||
ದಾಸ ಸಾಹಿತ್ಯ ಪ್ರಕಾರ
ಬರೆದವರು