ಧರ್ಮಕ್ಕೆ ಕೈ ಬಾರದೀ ಕಾಲ
(ರಾಗ ಪೂರ್ವಿ. ಅಟ ತಾಳ)
ಧರ್ಮಕ್ಕೆ ಕೈ ಬಾರದೀ ಕಾಲ , ಪಾಪ -
ಕರ್ಮಕ್ಕೆ ಮನಸೋಲೋದೀ ಕಲಿಕಾಲ
ದಂಡ ದ್ರೋಹಕೆ ಉಂಟು
ಪುಂಡು ಪೋಕರಿಗುಂಟು
ಹೆಂಡತಿ ಮಕ್ಕಳಿಗಿಲ್ಲೀ ಕಾಲ
ದಿಂಡೇರಿಗುಂಟು ಜಗ ಭಂಡರಿಗುಂಟು
ಅಂಡಲೆವರಿಗಿಲ್ಲವೀ ಕಾಲ
ಮತ್ತೆ ಸುಳ್ಳರಿಗುಂಟು
ನಿತ್ಯ ಹಾದರಕುಂಟು
ಉತ್ತಮರಿಗಿಲ್ಲವೀ ಕಾಲ
ತೊತ್ತೇರಿಗುಂಟು ತಾಟಕಿಗುಂಟು
ಹೆತ್ತ ತಾಯಿಗಿಲ್ಲವೀ ಕಾಲ
ಹುಸಿ ದಿಟವಾಯಿತು
ರಸಕಸವಾಯಿತು
ಸೊಸೆ ಅತ್ತೆ ದಂಡಿಸೋದೀ ಕಾಲ
ಬಿಸಜಾಕ್ಶ ಪುರಂದರ ವಿಠಲನ ಮನದಲ್ಲಿ
ಸ್ತುತಿಸುವವರಿಗಿಲ್ಲವೀ ಕಾಲ
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments