ಕಂಡೆ ಕಂಡೆ ರಾಜರ

ಕಂಡೆ ಕಂಡೆ ರಾಜರ

(ರಾಗ ಭೈರವಿ ಅಟತಾಳ ) ಕಂಡೆ ಕಂಡೆ , ರಾಜರ , ಕಂಡೆ ಕಂಡೆ ||ಪ|| ಕಂಡೆ ಕಂಡೆನು ಕರುಣನಿಧಿಯನು ಕರಗಳಂಜಲಿ ಮಾಡಿ ಮುಗಿವೆನು ಲಂಡ ಮಾಯಿಗಳ ಗುಂಡಿ ಒಡೆಯಲು- ದ್ದಂಡ ಮಾರುತಿ ಪದಕೆ ಬರುವನ ||ಅ.ಪ|| ಪಂಚ ವೃಂದಾವನದಿ ಮೆರೆಯುವ ಪಂಚಬಾಣನ ಪಿತನ ಸ್ಮರಿಸುವ ಪಂಚನಂದನ ಮುಂದೆ ಆಗುತ ಮಿಂಚಿನಂದದಿ ಪೊಳೆವ ಮಹಿಮನ || ಪಂಕಪಾತಕ ಕಳೆವ ದೇವನ ಪಂಕಜಾರಿನಿಭೇಂದುವಕ್ತ್ರನ ಆ- ತಂಕವಿಲ್ಲದೆ ಭಜಿಪ ಸುಜನರ ಶಂಕೆ ಬಿಡಿಸುವ ಶಂಕರೇಶನ || ಭಜಿಸುವೋರಿಗೆ ಭಾಗ್ಯ ಕೊಡುವನ ಋಜುಗಣೇಶಮರೇಂದ್ರವಂದಿತ ನಿಜಪುರಂದರವಿಟ್ಠಲೇಶನ ಭಜನೆಮಾಡುವ ಭಾವಿ ಮರುತರ (ಬ್ರಹ್ಮರ) ||
ದಾಸ ಸಾಹಿತ್ಯ ಪ್ರಕಾರ
ಬರೆದವರು