ಕೇಳಿದೆ ನಿನ್ನಯ ಸುದ್ದಿ

ಕೇಳಿದೆ ನಿನ್ನಯ ಸುದ್ದಿ

(ರಾಗ ಶಂಕರಾಭರಣ ಅಟತಾಳ) ಕೇಳಿದೆ ನಿನ್ನಯ ಸುದ್ದಿ , ಕೇಳಿದೆ || ನೀರೊಳು ಮುಳುಗಿದೆಯಂತೆ , ದೊಡ್ಡ ಭರ ಗಿರಿಯ ಪೊತ್ತೆಯಂತೆ , ಗಡ್ಡೆ ಬೇರು ಗೆಣಸ ಮೆದ್ದೆಯಂತೆ , ಅಹ ಮೂರೆರಡರಿಯದ ತರಳನ , ಮಾತಿಗೆ ಘೋರ ದಾನವನ ಸಂಹಾರ ಮಾಡಿದೆಯೆಂದು || ನಾರಿಯೊಬ್ಬಳ ಪೆತ್ತೆಯಂತೆ , ಹೆತ್ತ ನಾರಿಯಳನು ಕೊಯ್ದೆಯಂತೆ ,ನಿನ್ನ ನಾರಿಚೋರನ ಕೊಂದೆಯಂತೆ , ಅಹ , ಊರನಾರಿಯರ ಸೂರೆಗೊಳ್ಳುತ್ತ ಪರ- ನಾರಿಯರಭಿಮಾನ ಗಾರುಮಾಡಿದೆಯೆಂದು || ತುರಗರಾವುತನಾದೆಯಂತೆ , ನಿನ್ನ ಕರದಿ ಕಡೆಗೋಲ ನೇಣಂತೆ , ನಿನಗೆ ಸರಿ ಧರೆಯೊಳಗಿಲ್ಲವಂತೆ , ಅಹ ವರದ ಶ್ರೀಪುರಂದರವಿಟ್ಠಲ ನಿನ್ನ ಈ ಪರಿಪರಿ ಮಹಿಮೆಯ ಹರ್ಷಿಸುತಲಿ ನಾನು ||
ದಾಸ ಸಾಹಿತ್ಯ ಪ್ರಕಾರ
ಬರೆದವರು