ಕೃಷ್ಣನಾಮವ ನೆನೆದು ಧನ್ಯನಾಗೋ

ಕೃಷ್ಣನಾಮವ ನೆನೆದು ಧನ್ಯನಾಗೋ

(ರಾಗ ಕಾಂಭೋಜ ಝಂಪೆತಾಳ) ಕೃಷ್ಣನಾಮವ ನೆನೆದು ಧನ್ಯನಾಗೋ || ಪ|| ನೆಲೆಯಿಲ್ಲ ಸಂಸಾರವಿಳಿದಂತೆ ಈ ಬಾವಿಯೊಳು ಸಿಲುಕಿ ಸಿಲುಕಿ ಭ್ರಮಿತನಾದೆ ಪಣೆಯಲಿ ಬರೆದ ಕಲ್ಪಣವದು ನರಹರಿಯ ಸ್ಮರಣೆಯೊಳಗಿರು ಕಂಡ್ಯ ಮನವೆ || ದಾರ ಪುತ್ರರಿಗೆ ನೀ ಹಂಬಲಿಸಿ ಚಿಂತಿಸಿ ಮಾಯ ಪ್ರಪಂಚದೊಳು ಸಿಲುಕಿ ಸಿಲುಕಿ ಏನು ಎಂತೆಂಬುವ ಜ್ಞಾನವನು ತಿಳಿಯದೆ ಶ್ರೀರಾಮರ ಸ್ಮರಣೆಯೊಳಗಿರು ಕಂಡ್ಯ ಮನವೆ || ಪುತ್ರ ಪೌತ್ರರ ನೆಚ್ಚಿ ಕೆಡಲುಬೇಡ ಮಿತ್ರಬಂಧುಗಳೆಂಬ ಹಂಬಲವು ಬೇಡ ದತ್ತದಲಿ ಬರೆದ ಕಲ್ಪಣವದು ತಪ್ಪದು ಅಚ್ಯುತನ ಸ್ಮರಣೆಯೊಳಗಿರು ಕಂಡ್ಯ ಮನವೆ || ಒಂದೊಂದು ಎಡೆಗಳಿಗೆ ಚಂದವಾಗಿ ತೋರುತಲಿದೆ ಮುಂದೆ ಬಡಿಸಿದ ಎಡೆ ತೀರಿಸುತ್ತ ಪುಂಡರೀಕಾಕ್ಷ ಸಿರಿಪುರಂದರವಿಠಲನ್ನ ತಂಡತಂಡದಿ ನೆನೆದು ಸುಖಿಯಾಗು ಮನವೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು