ಜಯ ಮಂಗಳಂ ನಿತ್ಯ ಶುಭ ಮಂಗಳಂ

ಜಯ ಮಂಗಳಂ ನಿತ್ಯ ಶುಭ ಮಂಗಳಂ

(ರಾಗ ಭೈರವಿ ಅಟತಾಳ) ಜಯ ಮಂಗಳಂ ನಿತ್ಯ ಶುಭ ಮಂಗಳಂ ||ಪ|| ಮಂಗಳಂ ಆನಂದ ತೀರ್ಥ ಗುರುರಾಯರಿಗೆ ಮಂಗಳಂ ಮಧುರನುಡಿ ಸಂಭಾಷ್ಯಗೆ ಮಂಗಳಂ ಮೈಥಿಲಿಗೆ ಅಂಗುಲೀಯನಿತ್ತವಗೆ ಮಂಗಳಂ ಜಯ ವೀರ ಮಧ್ವಮುನಿಗೆ ||ಅ.ಪ|| ಅಂಜನೆಯ ಗರ್ಭಸಂಜಾತ ವಿಖ್ಯಾತನಿಗೆ ಸಂಜೀವನವ ತಂದ ಹನುಮಂತಗೆ ಅಂಜದಂತಭಯಕರ ಕಪಿಗಳಿಗೆ ತೋರಿದಗೆ ಕಂಜಾಕ್ಷರಾಮನ ಭಜಿಸುವವಗೆ || ದ್ವಾಪರದಿ ಕುಂತಿಯ ಗರ್ಭದಲಿ ಜನಿಸುತಲಿ ಪಾಪಿ ದೈತ್ಯರನೆಲ್ಲ ಸೀಳಿದವಗೆ ದ್ರೌಪದಿಗೆ ಸೌಗಂಧಿಕುಸುಮವ ತಂದವಗೆ ಶ್ರೀಪತಿಯ ದಾಸ ಭೀಮಸೇನನಿಗೆ || ಕಲಿಯುಗದಿ ಸಂಕರನ ದುರ್ಮತವ ಮುರಿದವಗೆ ಖಳ ಬೌದ್ಧಚಾರ್ವಾಕಮತ ಗೆಲಿದಗೆ ಒಲಿದು ಸಚ್ಛಾಸ್ತ್ರವನು ಸಾಧುಗಳಿಗೊರೆದವಗೆ ಸುಲಭ ಪುರಂದರವಿಟ್ಠಲನ ಮಂತ್ರಿಗೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು