ಜನರ ನಡತೆ ಕೇಳಿರಯ್ಯ

ಜನರ ನಡತೆ ಕೇಳಿರಯ್ಯ

(ರಾಗ ನಾದನಾಮಕ್ರಿಯೆ ಅಟತಾಳ) ಜನರ ನಡತೆ ಕೇಳಿರಯ್ಯ ||ಪ|| ಇಂಥ ಜನರ ನೋಡಿ ನೀವು ಏನನಂಬಿರಯ್ಯ ||ಅ.ಪ|| ತಾಯಿಗನ್ನವನಿಕ್ಕರಯ್ಯ , ಬಲು ಮಾಯ ಮಾತಿಗೆ ಮರುಳಾಗುವರಯ್ಯ ನ್ಯಾಯವೆಂಬುದು ಇಲ್ಲವಯ್ಯ , ಅ- ನ್ಯಾಯವೇ ಗತಿಯೆಂದು ಸಾಧಿಪರಯ್ಯ || ಉತ್ತಮ ಸ್ತ್ರೀಯಳ ಬಿಟ್ಟು , ತನ್ನ ವೃತ್ತಿಗಳೆಲ್ಲ ಸೂಳೆಗೆ ಕೊಟ್ಟು ಮತ್ತರೊಳಗೆ ಕೂಡಿ ಕೆಟ್ಟು , ಇಹ ಉತ್ತಮರೆಂಬರೀ ಜಗದೊಳು ಮುಟ್ಟು || ಗಂಡನ್ನ ತಾ ಬಿಡುತಿಹಳು , ಪರ- ಮಿಂಡನ್ನ ಕೂಡಿ ಲೋಲಾಡುತಿಹಳು ಮುಂಡೇರು ಹೆಚ್ಚು ಜಗದೊಳು , ಭೂ- ಮಂಡಲದೊಳಗಿಂಥ ನಡತೆಲ್ಲ ಬಹಳ || ಹೊನ್ನುಳ್ಳ ಹೊಲೆಯರುತ್ತಮರು , ಅವರ ಬಣ್ಣಿಸಿ ಬಾರೆಂದು ಮನೆಗೆ ಕರೆವರು ಕನಕಾಂಬರವನು ಕೊಡುವರು , ಅವರಿಗೆ ಬಿನ್ನಣದಲಿ ಬಲು ಉಪಚರಿಸುವರು || ಬಡವನ್ನ ಬಾರೆನ್ನರಯ್ಯ , ಏನು ನಡತೆಯಿದ್ದರು ಪ್ರಯೋಜನವಿಲ್ಲವಯ್ಯ ಕಡುಮೂರ್ಖರಿಗೆ ಕಾಲವಯ್ಯ , ಎ- ನ್ನೊಡೆಯ ಪುರಂದರವಿಠಲ ಕೇಳಯ್ಯ ||
ದಾಸ ಸಾಹಿತ್ಯ ಪ್ರಕಾರ
ಬರೆದವರು