ಬಂದನೇನೆ ರಂಗ

ಬಂದನೇನೆ ರಂಗ

( ರಾಗ ಶ್ರೀ. ಆದಿ ತಾಳ) ಬಂದನೇನೆ ರಂಗ ಬಂದನೇನೆ, ಎನ್ನ ||ಪ|| ತಂದೆ ಬಾಲಕೃಷ್ಣ ನವನೀತ ಚೋರ ||ಅ|| ಘಿಲುಘಿಲುಘಿಲುರೆಂಬ ಪೊನ್ನಂದುಗೆ ಗೆಜ್ಜೆ ಹೊಳೆ ಹೊಳೆಯುವ ಪಾದವನೂರುತ ನಲಿನಲಿದಾಡುವ ಉಂಗುರ ಅರಳೆಲೆ ಥಳಥಳಥಳ ಹೊಳೆಯುತ ಶ್ರೀ ಕೃಷ್ಣ || ಕಿಣಿಕಿಣಿಕಿಣಿರೆಂಬ ಕರದ ಕಂಕಣ ಬಳೆ ಝಣಝಣಝಣರೆಂಬ ನಡುವಿನ ಗಂಟೆ ಧಣಧಣಧಣರೆಂಬ ಪಾದದ ತೊಡವಿನ ಮಿಣಿಮಿಣಿ ಕುಣಿದಾಡುತ ಶ್ರೀ ಕೃಷ್ಣ || ಹಿಡಿಹಿಡಿಹಿಡಿಯೆಂದು ಪುರಂದರವಿಠಲನ ದುಡುದುಡುದುಡುದುಡನೆ ಓಡುತ ನಡೆನಡೆನಡೆಯೆಂದು ಮೆಲ್ಲನೆ ಪಿಡಿಯಲು ಬಿಡಿಬಿಡಿಬಿಡಿ ದಮ್ಮಯ್ಯ ಎನ್ನುತ ||
ದಾಸ ಸಾಹಿತ್ಯ ಪ್ರಕಾರ
ಬರೆದವರು