ಬಲವು ಬಲವೆ ನಿನ್ನ ಬಲವಲ್ಲದೆ

ಬಲವು ಬಲವೆ ನಿನ್ನ ಬಲವಲ್ಲದೆ

ಬಲವು ಬಲವೆ ನಿನ್ನ ಬಲವಲ್ಲದೆ ( ರಾಗ ಮುಖಾರಿ. ಝಂಪೆ ತಾಳ) ಬಲವು ಬಲವೆ ನಿನ್ನ ಬಲವಲ್ಲದೆ ಮಿಕ್ಕ ಬಲಗಳುಂಟೆ ಬಣಗು ಗ್ರಹಗಳಿಂದ ||ಪ|| ಹರಿ ನಿನ್ನ ಕೃಪೆಯೆನಗೆ ಚಂದ್ರ ತಾರಾ ಬಲವು ಹರಿ ನಿನ್ನ ಕರುಣವೆ ರವಿಯ ಬಲವು ಹರಿ ನಿನ್ನ ಮೋಹವೇ ಎನಗೆ ಗುರು ಭೃಗು ಬಲವು ಹರಿ ನಿನ್ನ ಒಲುಮೆಯ ಶನಿಯ ಬಲವು || ಮಂಗಳ ಮಹಿಮ ನಿನ್ನ ಅಂಗದರುಶನ ಸುಖದ ಮಂಗಳನ ಬಲವು ಎನ್ನಂಗಕೆ ಸದಾ ರಂಗ ನಿನ್ನಯ ಚರಣ ಕಂಗಳಲಿ ನೋಡುವುದು ಹಿಂಗದೆ ಸುಖವನೀವ ಸೌಮ್ಯ ಬಲವಯ್ಯ || ಆದಿಮೂರುತಿ ನಿನ್ನನರಿವುದೇ ರಾಹುಬಲ ಆದಿಮೂಲನೆ ನಿನ್ನ ಗುಣಕಥನವ ಆದರಿಸಿ ಕೊಂಡಾಡುತಿಹುದೆನಗೆ ಕೇತುಬಲ ಆದಿಮಹಿಮನೆ ಮಹಾ ಪುರಂದರವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು