ಧೂಪಾರತಿಯ ನೋಡುವ ಬನ್ನಿ ನಮ್ಮ(೨).

ಧೂಪಾರತಿಯ ನೋಡುವ ಬನ್ನಿ ನಮ್ಮ(೨).

( ರಾಗ ಗಮನಶ್ರಮ. ಚಾಪು ತಾಳ) ಧೂಪಾರತಿಯ ನೋಡುವ ಬನ್ನಿ, ನಮ್ಮ ಗೋಪಾಲ ಕೃಷ್ಣ ದೇವರ ಪೂಜೆಯ || ಪ|| ಮದ್ದಳೆ ಝಾಗಟೆ ತಾಳ ದುಂದುಭಿ ಭೇರಿ ತದ್ಧಿಮಿ ಧಿಮಿಕೆಂಬ ವಾದ್ಯಗಳು ಅದ್ಭುತ ಶಂಖನಾದಗಳಿಂದಲಿ ನಮ್ಮ ಪದ್ಮನಾಭದೇವರ ದಿವ್ಯ ಪೂಜೆಯ || ಅಗರುಚಂದನ ಧೂಪ ಗುಗ್ಗುಳ ಸಾಂಬ್ರಾಣಿ ಮಘಮಘಿಸುವ ಧೂಪಾರತಿಯು ಮಿಗಿಲಾದ ಏಕಾರತಿ ಭಕ್ತಿಯಲಿ ನಮ್ಮ ಜಗನ್ನಾಥ ವಿಟ್ಠಲ ದೇವರ ಪೂಜೆಯ || ಹರಿಸರ್ವೋತ್ತಮನ ಭಕ್ತರಾಧಾರನ ಪರಮ ಮಂಗಳ ಮೂರ್ತಿಪಾವನನ ಪರ ದೈವವಾದಂಥ ಶ್ರೀ ರಂಗನಾಥನ ಪುರಂದರವಿಠಲ ದೇವರ ಪೂಜೆಯ ||
ದಾಸ ಸಾಹಿತ್ಯ ಪ್ರಕಾರ
ಬರೆದವರು