ಡಂಭಕ ಭಕ್ತಿಗೆ

ಡಂಭಕ ಭಕ್ತಿಗೆ

( ರಾಗ ಕಾಂಭೋಜ. ಝಂಪೆ ತಾಳ) ಡಂಭಕ ಭಕ್ತಿಗೆ ಮೆಚ್ಚಿ ಕೊಡ(ಳ್ಳ?)ನು ಕೃಷ್ಣ ||ಪ|| ಡೊಂಬ ಲಾಗವ ಹಾಕಿ ಡೊಂಡೊಂಡೆ ಹೊರಳಿದರಿಲ್ಲ ||ಅ|| ಹೆಚ್ಚೆಚ್ಚು ಬಯಸಿದರಿಲ್ಲ ಹೆಚ್ಚರಿಕೆ ತತಿಗಿಲ್ಲ ಕಚ್ಚೆಕೈ ಶುದ್ಧವಿಲ್ಲದೆ ಕರ್ಮವಿಲ್ಲ ಬಚ್ಚಿಟ್ಟರಿಲ್ಲ ನಿರ್ಭಾಗ್ಯರಿಗೆ ಇಂದೆನ್ನ ಅಚ್ಯುತಾನಂತ ಶ್ರೀಹರಿಯ ನೆನೆ ಕಂಡ್ಯ ಮನವೆ || ಕೆಟ್ಟನೆಂದರು ಇಲ್ಲ ಕ್ಲೇಶಪಟ್ಟರು ಇಲ್ಲ ಅಟ್ಟಮಡಿಸಿ ನಿಷ್ಠೂರ ಆಡಿದರಿಲ್ಲ ವಟವಟನೆ ಕಪ್ಪೆಯಂತೆ ಒದರಿಕೊಂಡರು ಇಲ್ಲ ಬೆಟ್ಟದಿಂದ ತಲೆ ಕೆಳಗೆ ಬಿದ್ದರೂ ಇಲ್ಲ || ಕನ್ನವಿಟ್ಟರು ಇಲ್ಲ ಕಡಿದಾಡಿದರು ಇಲ್ಲ ಕುನ್ನಿಯಂತ್ಯಾವಾಗ ಕೂಗಿದರು ಇಲ್ಲ ತಾನೆ ಕೊಡದನಕ ಕೊಸರಿಕೊಂಡರು ಇಲ್ಲ ಚೆನ್ನ ಪುರಂದರವಿಠಲನ್ನ ದೂರಿದರಿಲ್ಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು